ಮಂಗಳೂರು: ಬಿ.ಸಿ.ರೋಡ್‌ – ಚಾರ್ಮಾಡಿ ರಸ್ತೆ ಅಭಿವೃದ್ದಿಗೆ ಕೇಂದ್ರ ಸರಕಾರದ ವತಿಯಿಂದ 22 ಕೋ.ರೂ. ಮಂಜೂರು ಆಗಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೊತ್ತದಲ್ಲಿ ಅವಶ್ಯ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಶಿರಾಡಿ ಘಾಟಯಲ್ಲಿ ಸಂಚಾರ ಬಂದ್‌ ಹಿನ್ನೆಲೆಯಲ್ಲಿ ಚಾರ್ಮಾಡಿಯಲ್ಲಿ ಸಂಚಾರ ಸುಗಮ ದೃಷ್ಟಿಯಿಂದ ನೀರು ಹರಿದು ಹೋಗುವ ಚರಂಡಿಗಳಿಗೆ ಮಣ್ಣು ಹಾಕಿ ಅಗಲಗೊಳಿಸಲಾಗಿತ್ತು. ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಣ್ಣು ತೆರವುಗೊಳಿಸುವ ಕಾರ್ಯ ನಡೆಸಲು ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
13-nalin-kumar-kateel

ಬಿ.ಸಿ.ರೋಡ್‌-ಮಾಣಿರಸ್ತೆ: 7 ಕೋ.ರೂ. ಮಂಜೂರು

ರಾ.ಹೆ.75ರಲ್ಲಿ ಬಿ.ಸಿ.ರೋಡ್‌ನಿಂದ ಮಾಣಿವರೆಗೆ ರಸ್ತೆ ನಿರ್ವಹಣೆಗೆ ಕೇಂದ್ರ ಸರಕಾರದ ವತಿಯಿಂದ 7 ಕೋ.ರೂ. ಮಂಜೂರಾಗಿದೆ . ಬಿ.ಸಿ.ರೋಡು – ಹಾಸನ ರಸ್ತೆ ಉನ್ನತೀಕರಣಗೊಳ್ಳುತ್ತಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಮಗಾರಿ ಪ್ರಾರಂಭಿಸುವರೆಗೆ ಇದನ್ನು ನಿರ್ವಹಿಸುವ ದೃಷ್ಟಿಯಿಂದ ಈ ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದು ನಳಿನ್‌ ಕುಮಾರ್‌ ಕಟೀಲು ತಿಳಿಸಿದರು.

ಶಿರಾಡಿ ಘಾಟಿ ರಸ್ತೆ

ಶಿರಾಡಿ ಘಾಟಿಯಲ್ಲಿ ಪ್ರಥಮಹಂತದ ಕಾಮಗಾರಿಯಲ್ಲಿ 10 ಕಿ.ಮೀ. ಕಾಂಕ್ರೀಟೀಕರಣ ಪೂರ್ಣಗೊಂಡಿದೆ. ಬಾಕಿ ಇರುವ 3 ಕಿ.ಮೀ. ಕಾಮಗಾರಿ ಈ ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳಲಿದ್ದು ಜೂನ್‌ನಿಂದ ಸಂಚಾರಕ್ಕೆ ಮುಕ್ತವಾಗಲಿದೆ. ಕಾಮಗಾರಿಯ ಗುಣಮಟ್ಟದ ಬಗ್ಗೆ ತಜ್ಞರಿಂದ ಥರ್ಡ್‌ಪಾರ್ಟಿ ತಪಾಸಣೆಯನ್ನು ನಡೆಸಲಾಗಿದೆ.
ಎರಡನೇ ಹಂತದಲ್ಲಿ 13 ಕಿ.ಮೀ. ಕಾಂಕ್ರೀಟೀಕರಣ ಹಾಗೂ 13 ಕಿ.ಮೀ. ಡಾಮರೀಕರಣ ಕಾಮಗಾರಿ ನಡೆಯಲಿದೆ. ಈಗಾಗಲೇ 3 ಮಂದಿ ಗುತ್ತಿಗೆದಾರರು ಟೆಂಡರ್‌ ಹಾಕಿದ್ದು ಪ್ರಕಿಯೆಗಳು ಅಂತಿಮಗೊಂಡು ಮಳೆಗಾಲ ಮುಗಿದ ಮೇಲೆ ಕಾಮಗಾರಿ ಪ್ರಾರಂಭವಾಗಲಿದೆ. ಮಳೆಗಾಲದಲ್ಲಿ ಹೆಚ್ಚಿನ ಸಮಸ್ಯೆಗೆ ಕಾರಣವಾಗಿದ್ದ 13 ಕಿ.ಮೀ. ರಸ್ತೆ ಕಾಂಕ್ರೀಟೀಕರಣಗೊಂಡಿರುವ ಹಿನ್ನೆಲೆಯಲ್ಲಿ ಈ ಬಾರಿ ಸಂಚಾರಕ್ಕೆ ಸಮಸ್ಯೆಯಾಗದು ಎಂದರು.

By Suddi9

Leave a Reply

Your email address will not be published. Required fields are marked *