ಬಂಟ್ವಾಳ: ನೇಪಾಳ ಭೂಕಂಪ ದುರಂತದ ನಿಧಿ ಸಂಗ್ರಹಕ್ಕಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಆಶ್ರಯದಲ್ಲಿ ಎ.29 ಬುಧವಾರ ಅಪರಾಹ್ನ 3 ಗಂಟೆಯಿಂದ ಬಿ.ಸಿ.ರೋಡಿನ ಪೊಳಲಿ ದ್ವಾರದಿಂದ ಪಾದಯಾತ್ರೆಯಲ್ಲಿ ನಿಧಿ ಸಂಗ್ರಹಣೆ ನಡೆಯಿತು. ಉಳಿಪ್ಪಾಡಿ ಗುತ್ತು ರಾಜೇಶ್ ನಾಯಕ್ ಕುಂಭಕ್ಕೆ ಹಣ ಹಾಕುವ ಮೂಲಕ ನಿಧಿ ಸಂಗ್ರಹಣೆಗೆ ಚಾಲನೆ ನೀಡಿದರು. ಪಕ್ಷದ ವಿವಿಧ ನಾಯಕರಾದ ಪದ್ಮನಾಭ ಕೊಟ್ಟಾರಿ, ರುಕ್ಮಯ ಪೂಜಾರಿ, ಯಶವಂತ ಡಿ. ಕ್ಷೇತ್ರ ಸಮಿತಿ ಅಧ್ಯಕ್ಷರಾದ ಜಿ.ಆನಂದ , ದಿನೇಶ್ ಅಮ್ಟೂರು, ಆನಂದ ಎ, ಶಂಭುರು, ದಿನೇಶ್ ಭಂಡಾರಿ, ಕೃಷ್ಣಪ್ಪ ಪೂಜಾರಿ ಮತ್ತಿತರರು ಭಾಗವಹಿಸಿದ್ದರು.


