ಸುದ್ದಿ9 ಕೈಕಂಬ: ಯಶಸ್ವೀ ವಿದ್ಯಾರ್ಥಿ ಎನಿಸಿಕೊಳ್ಳಲು ಕೇವಲ ಶೈಕ್ಷಣಿಕ ಅಂಕಗಳಷ್ಟೇ ಸಾಲದು. ಆತನಲ್ಲಿ ನಿರಂತರ ಅಧ್ಯಯನ ಶೀಲತೆ ಹಾಗೂ ಅನ್ವೇಷಣಾತ್ಮಕ ಗುಣಗಳಿರಬೇಕು. ಮಕ್ಕಳಲ್ಲಿ ಪ್ರತಿಭೆ, ವ್ಯಕ್ತಿತ್ವ ಹಾಗೂ ಸ್ವಂತಿಕೆಯನ್ನು ರೂಪಿಸುವುದು ಗುರು ಅಥವಾ ಶಿಕ್ಷಕರ ಜವಾಬ್ದಾರಿ. ಜತೆಗೆ ಬದುಕಿನ ಸತ್ಯಗಳ ಅರಿವಿರಬೇಕು. ನಮ್ಮಲ್ಲಿ ಉತ್ತಮ ವ್ಯಕ್ತಿತ್ವವನ್ನು ಗುರುತಿಸಿದ ಮಾರ್ಗದರ್ಶಿ ಚೇತನಗಳನ್ನು ಮಾತಿನಿಂದ ನೆನೆಯಬೇಕು” ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಉಪಕುಲಪತಿ ಪೋ.ಕೆ ಬೈರಪ್ಪ ಹೇಳಿದರು.
ಅವರು ಕೆಂಜಾರು ಶ್ರೀ ದೇವಿ ತಾಂತ್ರಿಕ ಮಹಾವಿದ್ಯಾನಿಲಯದ ವಾರ್ಷಿಕ ದಿನಾಚರಣೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮಣಿಪಾಲ ವಿಶ್ವ ವಿದ್ಯಾನಿಲಯದ ಉಪಕುಲಪತಿ ಡಾ| ಎಚ್. ಎಸ್ ಬಲ್ಲಾಳ್ ದಿಕ್ಸೂಚಿ ಭಾಷಣಗೈದರು.

25 vm devi callege 2

 

 

 

9

 

_DSC7376

_DSC7377

8

 

 

12

13

14

15

16

17

 

25 vm devi callege 3

 

ವಿದ್ಯಾರ್ಥಿಗಳನ್ನು ಮಾದರಿಯಾಗಿ ರೂಪಿಸುವಲ್ಲಿ ಶಿಕ್ಷಕರ ಸಂವಹನ ಜಾಣ್ಮೆ ಪರಿಣಮಕಾರಿಯಾಗಿರಬೇಕು. ಪ್ರಾಪಂಚಿಕ ಸೂಕ್ಷ್ಮಗಳನ್ನು ಗ್ರಹಿಸಿ ಅನುಸರಿಸುವ ಚಾಕಚಕ್ಯತೆ ನಮ್ಮಲ್ಲಿರಬೇಕು. ಕೇವಲ ಅನುಕರುಣೆಯಿಂದ ನಾವು ಪರಾವಲಂಬಿಗಳಾಗುವ ಭೀತಿ ಇದೆ. ಬದುಕಿನ ಪರಿಪೂರ್ಣತೆಗೆ ಉತ್ತಮ ವಿದ್ಯೆ ಸಂಸ್ಕಾರ ಪಾಲನೆ ಸಾಂಸ್ಕೃತಿಕ ಒಲವು ಅಷ್ಟೇ ಅಗತ್ಯ. ಎಂದು ಡಾ| ಎಚ್. ಎಸ್. ಬಲ್ಲಾಳ್ ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ದೇವಿ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಅವರು ವಹಿಸಿದ್ದರು.
ಇದೇ ಸಂದರ್ಭ ಪ್ರತಿಭಾವಂತ ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕಾರ ನೀಡಿ ಗೌರವಿಸಲಾುತು.
ಶ್ರೀ ದೇವಿ ಎಜುಕೇಶನ್ ಟ್ರಸ್ಟ್ನ ಉಪಾಧ್ಯಕ್ಷ ನೀಶ್ ಎಸ್.ಶೆಟ್ಟಿ ಕಾರ್ಯದರ್ಶಿ ಮೈನಾ ಎಸ್. ಶೆಟ್ಟಿ, ಟ್ರಸ್ಟಿ, ಪ್ರಿಯಾಂಕ ಎನ್.ಶೆಟ್ಟಿ ಸಂಚಾಲಕಿ, ಪ್ರೋ| ಲತಾ ಡಿ ಪ್ರಿನ್ಸಿಪಾಲ್ ಡಾ| ದಿಲೀಪ್ ಕುಮಾರ್ ಕೆ. ವೇದಿಕೆಯಲ್ಲಿದ್ದರು.
ಪ್ರೋ| ಲತಾ ಡಿ. ಸ್ವಾಗತಿಸಿ ಅರುಣಾ ಡಿ. ವಿನೇಜಸ್ ಪ್ರಾಸ್ತಾವಿಕ ಮಾತನಾಡಿದರು. ಪ್ರಿನ್ಸಿಪಾಲ್ ಡಾ|
ದಿಲೀಪ್ ಕುಮಾರ್ ಕೆ.ವಾರ್ಷಿಕ ವರದಿ ಮಂಡಿಸಿದರು. ಮಸ್ಲಿನ್ ರೊಡ್ರಿಗಸ್ ವಂದಿಸಿದರು. ಬಳಿಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

By suddi9

Leave a Reply

Your email address will not be published. Required fields are marked *