‘ಗ್ರಾಮೀಣ ಸ್ವಾವಲಂಬಿ ಬದುಕಿಗೆ ಪ್ರೋತ್ಸಾಹ’
ಬಂಟ್ವಾಳ: ಗ್ರಾಮೀಣ ಜನತೆ ಕೂಡಾ ನಗರ ಪ್ರದೇಶಗಳಿಗೆ ಸರಿಸಾಟಿಯಾಗಿ ಬೆಳೆಯಲು ಅವರಲ್ಲಿ ಸ್ವಾವಲಂಬಿ ಮನೋಭಾವ ಬೆಳೆಸುವ ಅಗತ್ಯವಿದೆ. ಇದಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ಬಡಜನರು ಮತ್ತು ಕೃಷಿಕರು ಹಾಗೂ ಮಹಿಳೆಯರ ಸ್ವಾವಲಂಬಿ ಬದುಕಿಗೆ ಪ್ರೋತ್ಸಾಹ ನೀಡುವಲ್ಲಿ ಕೆನರಾ ಬ್ಯಾಂಕ್ ಪ್ರಾಮಾಣಿಕವಾಗಿ ಸ್ಪಂದಿಸುತ್ತಿದೆ ಎಂದು ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಹರಿದೀಶ್ ಉಮಾರ್ ಬಿ. ಹೇಳಿದ್ದಾರೆ.
ತಾಲ್ಲೂಕಿನ ಸೋರ್ಣಾಡು ಬಂಡಸಾಲೆ ಎಂಬಲ್ಲಿ ನೂತನವಾಗಿ ನಿರ್ಮಿಸಿದ ‘ಶ್ರೀಕೃಷ್ಣ ಕೃಪಾ’ ಕಟ್ಟಡದಲ್ಲಿ ಗುರುವಾರ ಶುಭಾರಂಭಗೊಂಡ ಕೆನರಾ ಬ್ಯಾಂಕಿನ ನೂತನ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.

ಮಂಗಳೂರು ವೃತ್ತ ಉಪ ಮಹಾಪ್ರಬಂಧಕ ಸುಜಾತ ಕರುಣಾಕರನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬ್ಯಾಂಕಿನ ಮಾರುಕಟ್ಟೆ ವಿಭಾಗ ಅಧಿಕಾರಿ ಮುರಳೀಧರ ಶೆಣೈ, ಬಂಟ್ವಾಳ ಬೂಡ ಅಧ್ಯಕ್ಷ ಪಿಯೂಸ್ ಎಲ್.ರಾಡ್ರಿಗಸ್, ವಕೀಲ ಅಶ್ವನಿಕುಮಾರ್ ರೈ, ಪ್ರಗತಿಪರ ಕೃಷಿಕ ಎ.ರಾಮಣ್ಣ ರೈ, ಉದ್ಯಮಿ ಎಂ.ದೇವಪ್ಪ ಶೆಟ್ಟಿ, ಸುರೇಶ ಪ್ರಭು ಖಂಡಿಗ, ಕಟ್ಟಡ ಮಾಲಕಿ ರಾಜೀವಿ ಕೃಷ್ಣ ನಾಯ್ಕ್ ಮತ್ತಿತರರು ಶುಭ ಹಾರೈಸಿದರು.
ಇದೇ ವೇಳೆ ಸ್ಥಳೀಯ ಕ್ರೀಡಾಪಟು ವಿ.ಎನ್.ತಾವ್ರೊ ಇವರನ್ನು ಸನ್ಮಾನಿಸಲಾಯಿತು.
ಉಪ ಮಹಾಪ್ರಬಂಧಕ ಸುಜಾತ ಕರುಣಾಕರನ್ ಸ್ವಾಗತಿಸಿ, ಶಾಖಾಧಿಕಾರಿ ರಮೇಶ ನಾಯ್ಕ್ ವಂದಿಸಿದರು. ವರ್ಷಾ ಕಾಮತ್ ಕಾರ್ಯಕ್ರಮ ನಿರೂಪಿಸಿದರು.
