ದೇಗುಲಗಳು ಸಾಮಾಜಿಕ ಹಿತಚಿಂತನೆಯ ಕೇಂದ್ರಗಳಗಬೇಕು. ಪೇಜಾವರ ಶ್ರೀ
ಮೂಡಬಿದರೆ: ದೇಗುಲಗಳ ಕೇವಲ ಪೂಜೆ-ಅರ್ಚನೆಗಳಿಗೆ ಸೀಮಿತಗೊಳ್ಳದೆ ಸಾಮೂಹಿಕ ಹಿತಚಿಂತನೆಯ ಕಾಳಜಿಯುಳ್ಳ ಸೇವಾ ಕಾರ್ಯಗಳ ನೇತೃತ್ವ ವಹಿಸಿದಾಗ ಸಮಾಜದಲ್ಲಿ ಸಮತೋಲನ ಹಾಗೂ ಸಾಮರಸ್ಯ ನೆಲೆಸಲು ಸಹಕಾರಿಯಾಗುತ್ತದೆ. ಶಾಸ್ತಾವು ಶ್ರೀ ಭೂತಾನಾಥೇಶ್ವರ ಕ್ಷೇತ್ರದಲ್ಲಿ ವಿಜಯನಾಥ ಶೆಟ್ಟಿ ಅವರ ಯಶಸ್ವೀ ನಾಯಕತ್ವದಲ್ಲಿ ಇಂತಹುದೊಂದು ಪರಿಕಲ್ಪನೆ ಈಗಾಗಲೇ ಸಾಕಾರಗೊಂಡು ನಾಡಿನ ಗಮನ ಸೆಳೆದಿರುವುದು ಸ್ತುತ್ಯಾರ್ಹ. ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಅವರು ಬಡಗಎಡಪದವು ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶಾಭಿಷೆಕ ಮಹೋತ್ಸವದಲ್ಲಿ ಪಾಲ್ಗೊಂಡು ಅನುಗ್ರಹ ಸಂದೇಶ ನೀಡಿದರು.
ಉಡುಪಿ ಶೀರೂರು ಮಠದ ಶ್ರೀ ಲಕ್ಮ್ಷೀವರ ತೀರ್ಥ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಗುರುಪುರ ವಜ್ರದೇಹೀ ಕ್ಷೇತ್ರದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರುಗಳು ಬ್ರಹ್ಮಕಲಶಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಂಡು ಶುಭಾಶೀರ್ವಚನ ನೀಡಿದರು.
24vm Swamiji

IMG-20150423-WA0030

IMG-20150423-WA0019

IMG-20150423-WA0024

IMG-20150423-WA0025

IMG-20150423-WA0026

IMG-20150423-WA0027

IMG-20150423-WA0029
ಶ್ರೀ ವಾಕ್ಯ

ದೇಹ-ಮನಸ್ಸು-ಪರಿಸರ ಸ್ವಾಸ್ಥ್ಯಪೂರ್ಣವಾಗಿರಲು ದೇವತಾ ಕೇಂದ್ರಗಳ ಮೂಲಕ ಪರಿಣಾಮಕಾರಿ ಕ್ರಮ ಕೈಗೊಳ್ಳಬಹುದು.
ಉಡುಪಿ ಶ್ರೀರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ
ನಾಡಿನ ಸಂಸ್ಕೃತಿ-ಸಂಸ್ಕಾರದ ಉದ್ದೀಪನದ ಕಾರ್ಯದೇಗುಲಗಳಿಂದ ಪ್ರಾರಂಭಗೊಳ್ಳಬೇಕು.
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ
ಧರ್ಮ-ಸಾಮರಸ್ಯದ ಜಾಗೃತಿ ಮೂಡಿಸುವ ಕಾರ್ಯಗಳು ಹೆಚ್ಚಾಗಬೇಕು.
ಗುರುಪುರ ವಜ್ರದೇಹಿ ಕ್ಷೇತ್ರ ಶ್ರೀ ರಾಜಶೇಖರನಂದ ಸ್ವಾಮೀಜಿ.
ದೇವಳದ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿ ನಾಲ್ವರು ಸ್ವಾಮೀಜಿಗಳನ್ನು ಕ್ಷೇತ್ರದ ವತಿಯಿಂದ ಗೌರವಿಸಿದರು.
ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಜಯರಾಮ ಶೆಟ್ಟಿ, ಗೌರವಾಧ್ಯಕ್ಷರಾದ ಮಿಜಾರುಗುತ್ತು ಆನಂದ ಆಳ್ವ, ಜೀವಂಧರ ಕುಮಾರ್, ರಮೇಶ್ ಶೆಟ್ಟಿ, ಪ್ರೇಮಲಾತಾ ವಿ ಶೆಟ್ಟಿ, ಶೈಲಿನಿ ಸೇಮಿತ, ಉದಯಕುಮಾರ್ ಶೆಟ್ಟಿ ದೇವಳದ ಪ್ರಧಾನ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ, ಸಹಾಯಕ ಅರ್ಚಕ ಗುರುರಾಜ ಭಟ್, ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ತಾರಾನಾಥ ಆಳ್ವ, ಉಮಾನಾಥ ಕೋಟ್ಯಾನ್, ಸತ್ಯಜಿತ್ ಸುರತ್ಕಲ್, ಶ್ರೀ ಕ್ಷೇತ್ರ ಪೆರಾರದ ಸುೀರ್ ಪ್ರಸಾದ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ಧರು.
ಕಾಂತಪ್ಪ ಶೆಟ್ಟಿ ಸ್ವಾಗತಿಸಿ ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *