ಬಂಟ್ವಾಳ: ತಾಲೂಕು ಸಿದ್ಧಕಟ್ಟೆ ಸಮೀಪದ ಹಿಂಗಾಣಿ ದರ್ಖಾಸ್ ವಕ್ಕಾಡಿ ಮನೆ ನಿವಾಸಿ ನೀಲಯ್ಯ ಹರಿಜನ ಅವರ ಪುತ್ರ ರಾಜೇಶ(18) ಅವರು ಮೂಳೆ ಕ್ಯಾನ್ಸರ್‍ನಿಂದ ಬಾ„ಸುತ್ತಿದ್ದು ತುರ್ತು ಸಹಾಯ ನೀಡುವಂತೆ ಸಹೃದಯಿ ದಾನಿಗಳಿಗೆ ವಿನಂತಿಸುತ್ತಿದ್ದಾರೆ.
rajesh (1)
ಅವರಿಗೆ ಕಿಮೋಥೆರಪಿ ಜೊತೆಗೆ ತಿಂಗಳಿಗೆ ನಾಲ್ಕು ಬಾರಿ ಸುಮಾರು 30 ಸಾವಿರ ರೂ. ವೆಚ್ಚದ ಇಂಜೆಕ್ಷನ್ ನೀಡಬೇಕಿದ್ದು , ಆಪರೇಷನ್ ಹಾಗೂ ಇತರ ಖರ್ಚು ಎಲ್ಲಾ ಸೇರಿ ಅಂದಾಜು ಸುಮಾರು ಮೂರೂವರೆ ಲಕ್ಷ ರೂ. ಬೇಕಾಗಿದೆ.
ರಾಜೇಶ ಎಸೆಸ್ಸೆಲ್ಸಿ ಮುಗಿಸಿ ಪಿಯುಸಿಗೆ ಸೇರಿದ್ದ . ಕಾಲಿನಲ್ಲಿ ನೋವು ಕಾಣಿಸಿಕೊಂಡ ಕಾರಣ ಚಿಕಿತ್ಸೆಗಾಗಿ ವೈದ್ಯರಲ್ಲಿ ತೆರಳಿದಾಗ ಕ್ಯಾನ್ಸರ್ ಎಂದು ತಿಳಿದುಬಂದಿತ್ತು. ಇದರಿಂದಾಗಿ ವಿದ್ಯಾಭ್ಯಾಸವು ಮೊಟಕುಗೊಳಿಸಬೇಕಾಯಿತು. ನೀಲಯ್ಯ ಹರಿಜನ ಅವರು ಕೂಲಿ ಕಾರ್ಮಿಕರಾಗಿದ್ದು ತೀರಾ ಬಡತನದಲ್ಲಿದ್ದಾರೆ. ರಾಜೇಶನ ಚಿಕಿತ್ಸೆಗಾಗಿ ಮಂಗಳೂರಿಗೆ ಓಡಾಡಬೇಕಾಗಿರುವುದರಿಂದ ಕೂಲಿ ಕೆಲಸವೂ ಮಾಡುವಂತಿಲ್ಲ . ಚಿಕಿತ್ಸಾ ವೆಚ್ಚ ಜೊತೆ ನಿತ್ಯ ಖರ್ಚಿಗೆ ದಾರಿ ಕಾಣದೆ ಕಂಗಾಲಾಗಿದ್ದಾರೆ. ಮುಂದಕ್ಕೆ ಕುಟುಂಬಕ್ಕೆ ಆಧಾರವಾಗಬೇಕಾಗಿದ್ದ ಯುವಕ ಅನಾರೋಗ್ಯಕ್ಕೀಡಾದದ್ದು ಚಿಂತೆಗೀಡುಮಾಡಿದೆ. ಸೂಕ್ತ ಚಿಕಿತ್ಸೆ ದೊರಕಿದಲ್ಲಿ ರಾಜೇಶ ಗುಣಮುಖನಾಗಿ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗುತ್ತದೆ. ಸಾರ್ವಜನಿಕರು ರಾಜೇಶನ ಚಿಕಿತ್ಸೆಗೆ ನೆರವಾಗಬೇಕೆಂದು ವಿನಂತಿಸಿದ್ದಾರೆ. ನೀಲಯ್ಯ ಹರಿಜನ ಅವರ ಖಾತೆ ನಂಬ್ರ : 00483020049833, ಎಸ್‍ಸಿಡಿಸಿಸಿ ಬ್ಯಾಂಕ್ ಸಿದ್ಧಕಟ್ಟೆ , ಮೊಬೈಲ್: 9611815441

By suddi9

Leave a Reply

Your email address will not be published. Required fields are marked *