ಬಂಟ್ವಾಳ : ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವ ಶ್ರೀರಾಮ ಪರಿವಾರ ಮತ್ತು ಆಂಜನೇಯ ವಿಗ್ರಹಗಳಿಗೆ ಅಳದಂಗಡಿಯಲ್ಲಿ ಬೃಹತ್ ಶಿಲೆಯನ್ನು ಆಯ್ಕೆ ಮಾಡಲಾಗಿದೆ. ಏ.23 ಗುರುವಾರ ಬೆಳಿಗ್ಗೆ 6.00ಗಂಟೆಗೆ ಶ್ರೀರಾಮ ಮಂದಿರದ ಜೀಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕಲ್ಲಡ್ಕ ಡಾ ಪ್ರಭಾಕರ ಭಟ್ ಮತ್ತು ಶ್ರೀಮತಿ ಕಮಲಾ ಪ್ರ.ಭಟ್ ಶಿಲೆಗೆ ಪೂಜೆ ಸಲ್ಲಿಸಿ ಅಭಿಷೇಕ ಮಾಡಿದರು. ವಿಗ್ರಹ ನಿರ್ಮಾಣ ಕಾರ್ಯಕ್ಕಾಗಿ ಪ್ರಮುಖ ಶಿಲ್ಪಿ ಗುಣವಂತೇಶ್ವರರಿಗೆ ಗೌರವ ವೀಳ್ಯ ನೀಡಿದರು.
srirama mandira kalladka
ಈ ಸಂದರ್ಭದಲ್ಲಿ ಜೀಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಪದ್ಮನಾಭ ಕೊಟ್ಟಾರಿ, ಕಾರ್ಯಾಧ್ಯಕ್ಷ ಜಿತೇಂದ್ರ ಕೊಟ್ಟಾರಿ, ಮಂದಿರದ ಕಾರ್ಯದರ್ಶಿ ಕ ಕೃಷ್ಣಪ್ಪ, ಹಾಗೂ ಬಿ. ನಾರಾಯಣ ಸೋಮಯಾಜಿ, ನಾಗೇಶ್ ಕಲ್ಲಡ್ಕ, ಯತೀನ್ ಕುಮಾರ್, ಡೊಂಬಯ ಟೈಲರ್, ಕುಶಾಲಪ್ಪ ಅಮ್ಟೂರು, ಮೋನಪ್ಪ ದೇವಸ್ಯ, ಏಳ್ತಿಮಾರ್ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *