ಬಂಟ್ವಾಳ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಯೋಜನೆಯಡಿಯಲ್ಲಿ ರೂ.5ಲಕ್ಷ ವೆಚ್ಚದ ತುಂಬೆ ಗ್ರಾಮದ ಮಜಿ-ಬೆರ್ವ ರಸ್ತೆಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಗುದ್ದಲಿ ಪೂಜೆ ನೆರವೇರಿಸಿದರು.

ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ , ಮಮತಾ ಗಟ್ಟಿ , ರಾಜ್ಯ ಕೆ.ಪಿ.ಸಿ.ಸಿ. ಕಾರ್ಮಿಕ ವಿಭಾಗದ ಉಪಾಧ್ಯಕ್ಷ ಅಮೀರ್ ಅಹ್ಮದ್ ತುಂಬೆ , ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ್ ಕರ್ಕೆರಾ , ವಲಯ ಕಾಂಗ್ರೆಸ್ ಅಧ್ಯಕ್ಷ ಮೋನಪ್ಪ ಮಜಿ , ಭೂ ಬ್ಯಾಂಕ್ ನಾಮನಿರ್ದೇಶಿತ ಸದಸ್ಯ ಪ್ರಕಾಶ್ ಬಿ ಶೆಟ್ಟಿ , ಇಂಜಿನಿಯರ್ ಕೃಷ್ಣ , ನಿಸಾರ್ ಅಹ್ಮದ್, ಗೋಪಾಲ್ಕೃಷ್ಣ ತುಂಬೆ, ಗಣೇಶ್ ಸಾಲಿಯಾನ್, ಮಹಾಬಲ ಮಜಿ, ಪ್ರವೀಣ್ ಕೊಟ್ಟಿಂಜ , ಇಮ್ತಿಯಾಝ್ ದೇವದಾಸ್ ತುಂಬೆ ಮತ್ತಿತರರು ಉಪಸ್ಥಿತರಿದ್ದರು.
