ಬಂಟ್ವಾಳ: ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಇತಿಹಾಸ ಪ್ರಸಿದ್ದ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ನೂತನ ಆಡಳಿತ ಮೊಕ್ತೇಸರರಾಗಿ ಬಿಜೆಪಿ ಯುವಮೋರ್ಚದ ರಾಷ್ಟ್ರೀಯ ಕಾರ್ಯದರ್ಶಿ ವಿಕಾಸ್ ಪುತ್ತೂರು ಆಯ್ಕೆಯಾಗಿದ್ದಾರೆ.

ಭಾನುವಾರ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಕಾರ್ಯದರ್ಶಿಯಾಗಿ ಗಂಗಾಧರ ವೀರಕಂಬ ಮೊಕ್ತೇಸರರಾಗಿ ಬಿಎಸ್‍ಎನ್‍ಎಲ್ ಉದ್ಯೋಗಿ ದಿನಕರ ಮುಂಡಕೋಚಿ, ನಿವೃತ್ತ ಉಪನಿರೀಕ್ಷಕ ದಯಾನಂದ ಮಂಗಳೂರು, ಗಣೇಶ್ ಕಾಮತ್ ಪುಚ್ಚೆಕೆರೆ, ಭಾಸ್ಕರ ಪ್ರಭು, ನಿವೃತ್ತ ಯೋಧ ಶುಭಕರ ನಾಯಕ್ ಪಿಲಿಪಂಜರ, ಶ್ಯಾಮಲ ಆರ್.ನಾಯಕ್, ಅನಸೂಯ ಅಮ್ಟೂರು ಆಯ್ಕೆಯಾಗಿದ್ದಾರೆ.
ಸಾವಿರಾರು ವರ್ಷಗಳ ಇತಿಹಾಸ ಇರುವ ಈ ಕ್ಷೇತ್ರದಲ್ಲಿ 48 ದಿನಗಳ ಅಖಂಡ ಭಜನೆ ಹಾಗೂ 108 ದಿನಗಳ ಅಖಂಡ ಭಜನೆ ನಡೆದಿದ್ದು ದ.ಕ ಜಿಲ್ಲೆಯಲ್ಲಿಯೇ ಇದು ವಿಶೇಷ ಮಹತ್ವ ಪಡೆದುಕೊಂಡಿದೆ.
