ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಪಂಚಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರು ಮಂಂದಿರದ ಪ್ರತಿಷ್ಠಾ ತ್ರತೀಯ ವರ್ಷದ ವರ್ದಂತಿ ಉತ್ಸವವು ಕೊಳತ್ತಮಜಲಿನಲ್ಲಿ ಎ19ರಂದು ಭಾನುವಾರ ಪುರೋಹಿತರಾದ ಲೋಕೇಶ್ ಶಾಂತಿ ಅವರ ನೇತ್ರತ್ವದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಿತು.

ಬೆಳಗ್ಗೆ 7.30ರಿಂದ ಭಜನೆ, ಕಲಶಾಭಿಷೇಕ, ಸತ್ಯನಾರಾಯಣ ಪೂಜೆ ಮತ್ತು ಗುರು ಪೂಜೆ ಮಹಾಪೂಜೆ ನಂತರ ಅನ್ನ ಸಂತರ್ಪನೆ ನೆರವೇರಿತು. ಪಂಚಗ್ರಾಮ ಬಿಲ್ಲವ ಸಂಘದ ಅಧ್ಯಕ್ಷ ಗಂಗಾಧರ ಪೂಜಾರಿ ಕೊಪ್ಪಲ , ರಾಜುಕೋಟ್ಯಾನ್,ಯೋಗಿಶ್ ಪೂಜಾರಿ,ಉಮೇಶ್ ಪೂಜಾರಿ, ವಸಂತ ಪೂಜಾರಿ, ಕೇಶವಪೂಜಾರಿ, ರಮೇಶ್ ಪೂಜಾರಿ, ಜನಾರ್ಧನ ಪೂಜಾರಿ, ಕ್ರಷ್ಣಪ್ಪ ಪೂಜಾರಿ, ಬಿ.ಕೆ ಸರೋಜಿನಿ, ರೇವತಿ ರತ್ನಾಕರ್, ಕಸ್ತೂರಿ ಸುಧಾಕರ್ ಮತ್ತು ಬಿಲ್ಲವ ಬಾಂದವರು ಉಪಸ್ಥಿತರಿದ್ದರು.







