ಸುದ್ದಿ9 ಕೈಕಂಬ: ಎಸ್ ಕೆಎಸ್ಎಸ್ಎಫ್ ಅಮ್ಮುಂಜೆ ಶಾಖೆ ಇದರ ವತಿಯಂದ ಎ.19ರಂದು ಭಾನುವಾರ ಬ್ರಹತ್ ಸಮಸ್ತ ಸುನ್ನೀ ಸಮ್ಮೇಳನ ಹಾಗೂ ಬುರ್ದಾ ಮಜ್ಲಿಸ್ ಅಮ್ಮುಂಜೆ ಶಹೀದ್ ಸಿ. ಎಂ. ಉಸ್ತಾದ್ ವೇದಿಕೆಯಲ್ಲಿ ನಡೆಯಲಿದೆ.

ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಇದರ ಉದ್ಗಾಟನೆಯನ್ನು ಮಾಡಲಿದ್ದಾರೆ.
ಎ.ಕೆ. ಅಬೂಬಕರ್ ಮುಸ್ಲಿಯಾರ್ ಖಾಝಿ ಅತ್ರಾಡಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಅಸ್ಸಯ್ಯದ್ ಕುಂಬೋಲ್ ತಂಜೌಳ್ ಆಶಿರ್ವಚನ ನೀಡಲಿದ್ದಾರೆ. ಪ್ರಧಾನ ಭಾಷಣಕಾರರಾಗಿ ಮಲ್ಲೂರು ಬದಿಯ ನಗರ ಬಹು/ ಉಬೈದುಲ್ಲಾ ಅಝ್ ಹರಿ ಆಗಮಿಸಲಿದ್ದು ಮುಖ್ಯ ಅತಿಥಿಗಳಾಗಿ ಬಹು/ ಬಿಕೆ ಅಬ್ದುಲ್ ಖಾದರ್ ಖಾಸಿಮಿ ಬಂಬ್ರಾಣ, ಬಹು/ ಕೆಐ. ಅಬ್ದ್ಲ್ ಖಾದರ್ ದಾರಿಮಿ ಕುಕ್ಕಿಲ, ಬಹು/ ಯಾಸೀರ್ ಅರಾಫತ್ ಕೌಸರಿ ಆಗಮಿಸಲಿದ್ದಾರೆ. ಬುರ್ದಾ ಆಲಾಪನೆ: ನೂರುಲ್ ಉಲೂಂ ಬುರ್ದಾ ತಂಡ ಸರಲ್ಪಾಡಿ ಎಂದು ಅಮ್ಮುಂಜೆ ಎಸ್ ಕೆ ಎಸ್ ಎಸ್ ಎಫ್ ಶಾಖೆಯ ಅಧ್ಯಕ್ಷರು ತಿಳಿಸಿದ್ದಾರೆ.
