ನವದೆಹಲಿ: ಇತ್ತೀಚೆಗೆ ತೆರೆ ಕಂಡಿರುವ ಸನ್ನಿ ಲಿಯೋನ್ ಅಭಿನಯದ ರಾಗಿಣಿ ಎಂಎಂಎಸ್-2 ಚಿತ್ರ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯುಂಟುಮಾಡಿದೆ. ಹೀಗಾಗಿ, ಆ ಚಿತ್ರದ ಪ್ರಚಾರಕ್ಕೆ ತಡೆ ನೀಡಬೇಕು ಮತ್ತು ಸನ್ನಿ ಲಿಯೋನ್ ಳನ್ನು ದೇಶದಿಂದ ಹೊರಗಟ್ಟಬೇಕು ಎಂದು ಆಗ್ರಹಿಸಿ ಹಿಂದೂ ಜನ ಜಾಗೃತಿ ಸಮಿತಿ ರಾಷ್ಟ್ರೀಯ ಸೆನ್ಸಾರ್ ಮಂಡಳಿಗೆ ಮನವಿ ಸಲ್ಲಿಸಿದೆ.

sunny-leone
ಒಂದೊಮ್ಮೆ ಚಿತ್ರಕ್ಕೆ ನಿಷೇಧ ಹೇರದಿದ್ದರೆ ಚಿತ್ರಮಂದಿರಗಳ ಮುಂದೆ ಪ್ರತಿಭಟನೆ ನಡೆಸುವುದಾಗಿ ಸಂಘಟನೆ ಎಚ್ಚರಿಕೆ ನೀಡಿದೆ. ಚಿತ್ರ ಭಾರತೀಯ ಸಂಸ್ಕೃತಿ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆಯುಂಟುಮಾಡುತ್ತಿದೆ. ಪವಿತ್ರ `ಹನುಮಾನ್ ಚಾಲಿಸಾ” ಮೂಲಕ ಆರಂಭವಾಗುವ ಚಿತ್ರದಲ್ಲಿ ನಟೋರಿಯಸ್ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ತನ್ನ ಅಶ್ಲೀಲ ಭಂಗಿಗಳನ್ನು ಪ್ರದರ್ಶಿಸುತ್ತಾಳೆ. ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗಿದೆ.
ಸಮಾಜದಲ್ಲಿ ಅತ್ಯಾಚಾರ, ಅನಾಚಾರಗಳಂತಹ ಘೋರ ಕೃತ್ಯಗಳು ಮಿರಿ ಮೀರುತ್ತಿರುವ ಈ ಸಂದರ್ಭಗಳಲ್ಲಿ ಇಂತಹ ಚಿತ್ರಗಳು ಸಮಾಜವನ್ನು ಮತ್ತಷ್ಟು ಹಾಳುಗೆಡವುತ್ತವೆ ಎಂದು ಮನವಿ ಪತ್ರದಲ್ಲಿ ಹಿಂದೂ ಜನ ಜಾಗೃತಿ ಸಂಘಟನೆ ಆರೋಪಿಸಿದೆ.

By suddi9

Leave a Reply

Your email address will not be published. Required fields are marked *