ಸುದ್ದಿ9ಬಂಟ್ವಾಳ: ಸಂಗಬೆಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಸಿದ್ದಕಟ್ಟೆ ಪೇಟೆಯಲ್ಲಿ ಮತದಾರರ ಜಾಗೃತಿ ಜಾಥ ಬುಧವಾರ ಬೆಳಿಗ್ಗೆ ನಡೆಯಿತು. ಸಿದ್ದಕಟ್ಟೆಯ ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಜಾಥದಲ್ಲಿ ಪಾಲ್ಗೊಂಡು ಮತದಾರರಲ್ಲಿ ಜಾಗೃತಿ ಮೂಡಿಸುವ ಘೋಷಣೆಗಳನ್ನು ಕೂಗಿದರು. ಬಳಿಕ ಸಿದ್ದಕಟ್ಟೆ ಜಂಕ್ಷನ್ನಲ್ಲಿ ಸಮಾವೇಶಗೊಂಡು ಪ್ರತಿಜ್ಞೆ ಸ್ವೀಕರಿಸಿದರು.


ಈ ಸಂದರ್ಬ ತಹಶೀಲ್ದಾರ್ ಮಲ್ಲೇಸ್ವಾಮೀ ಮಾತನಾಡಿ ಹೆಚ್ಚಿನ ಪ್ರತಿಶತ ಮತದಾನ ಮಾಡಿದಾಗ ಮಾತ್ರ ಉತ್ತಮರನ್ನು ಆಯ್ಕೆ ಮಾಡಿ ಉತ್ತಮ ಸಕರ್ಾರವನ್ನು ಹೊಂದಲುಇ ಸಾಧ್ಯ ಎಂದರು. 1958ರಲ್ಲಿ ದೇಶದ ಮೊದಲ ಚುನಾವಣೆ ನಡೆದಾಗ ಶೇ. 30 ರಷ್ಟು ಮತದಾನ ಮಾತ್ರ ನಡೆದಿತ್ತು. ಆಗ ಶೇ.15ರಷು ಮತದಾನ ಪಡೆದವರು ಚುನಾವಣೆಯಲ್ಲಿ ಆಯ್ಕೆಯಾಗಿ ಬರುತ್ತಾರೆ. ಇದರಿಂದ ಶೇ. 70ರಷ್ಟು ಮತದಾರಗೆ ಬೆಲೆ ಇಲ್ಲದಂತಾಗುತ್ತದೆ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ನಡೆಯಬೇಕು ಎಂದರು.
ತಾಲೂಕು ಪಂಚಾಯತ್ ಕಾರ್ಯನಿವರ್ಾಹಣಾಧಿಕಾರಿ ಸಿಪ್ರಿಯನ್ ಮಿರಾಂಡ, ಸಂಗಬೆಟ್ಟು ಪಂಚಾಯತ್ ಅಭಿವೃದ್ದಿ ಅಧಿಕಾರಿ, ಸಿದ್ದಕಟ್ಟೆ ಪ್ರಥಮದಜರ್ೆ ಕಾಲೇಜು ಪ್ರಾಂಶುಪಾಲ ಸತ್ಯನಾರಾಯಣ ಭಟ್, ಉಪಪ್ರಾಂಶುಪಾಲ ಬಾಬು ಪಿ.ಎಂ. ಮತ್ತಿತರರು ಹಾಜರಿದ್ದರು.
ಸರ್ಕಾರಿ ಪ್ರಥಮದರ್ಜೆ ಕಾಲೇಜು ಸಿದ್ದಕಟ್ಟೆ, ಕಂದಾಯ ಇಲಾಖೆ, ಸಂಗಬೆಟ್ಟು ಗ್ರಾಮಪಂಚಾಯತ್, ರೋಟರಿ ಸಮುದಾಯದಳ ಹಾಗೂ ವಿವಿಧ ಸಮಘ ಸಂಸ್ಥೆಗಳ ಆಶ್ರಯದಲ್ಲಿ ಮತದಾರರ ಜಾಗೃತಿ ಜಾಥ ಹಮ್ಮಿಕೊಳ್ಳಲಾಗಿತ್ತು.
