ಸುದ್ದಿ9 ಪೊಳಲಿ: ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಜಾತ್ರಾ ಮಹೋತ್ಸವ ಏ.11ರಂದು ಶನಿವಾರ ಮಹಾರಥೋತ್ಸವ ನಡೆಯಲಿದೆ. ಪೂರ್ವಾಹ್ನ ವಿಧಿವತ್ತಾಗಿ ದೇವರಲ್ಲಿ ಪ್ರಾರ್ಥಿಸಿ ಮಹಾಪೂಜೆ ಆದ ಬಳಿಕ ರಥಾರೋಹಣವಾಗುತ್ತದೆ. ತದಾ ನಂತರ ರಥವನ್ನು ಸಾಂಕೇತಿಕವಾಗಿ ಎಳೆಯುವುದು. ಸಂಜೆ ರಥದಲ್ಲಿ ದೇವರನ್ನು ಇರಿಸಿ ದೇವರಿಗೆ ಪೂಜೆಯಾದ ಬಳಿಕ ಗುತ್ತಿನವರಿಂದ ಹಾಗೂ ಭಕ್ತಾಭಿಮಾನಿಗಳಿಂದ ತೆಂಗಿನ ಕಾಯಿ ಒಡೆದು ದೇವಸ್ಥಾನದ ಹೊರವಲಯದಲ್ಲಿ ರಥ ಎಳೆಯಲ್ಪಟ್ಟು ದೇವಸ್ಥಾನದ ಚೆಂಡಿನಗದ್ದೆಯಲ್ಲಿ ರಥವನ್ನು ನಿಲ್ಲಿಸಿ ಅಲ್ಲಿ ವಿಶೇಷವಾದ ಸಿಡಿಮದ್ದಿನ ಸುಡುವಿಕೆ ವಿಜೃಂಭಣೆಯಿಂದ ನೆರವೇರುವುದು.
ಆಮೇಲೆ ಮಂಗಳಾರತಿಯಾಗಿ ರಥವನ್ನು ಎಳೆದು ದೇವಸ್ಥಾನದ ಮುಂಭಾಗದಲ್ಲಿ ನಿಲ್ಲಿಸಲಾಗುವುದು. ಇದಾದ ಬಳಿಕ ಸ್ಥಾನದವರಿಗೆ, ಗುತ್ತಿನವರಿಗೆ, ಭಕ್ತಾಭಿಮಾಗಳಿಗೆ ಪ್ರಸಾದ ವಿತರಣೆ.ದೇವರನ್ನು ರಥದಿಂದ ಇಳಿಸಿ ದೇವಸ್ಥಾನದ ಹೊರಗೆ ಹಾಗೂ ಒಳಗೆ ಒಂದೊಂದು ಸುತ್ತು ಬಲಿಯಾಗಿ ಗರ್ಭಘಗುಡಿಗೆ ಪ್ರವೇಶಿಸುವುದು. ತದ ನಂತರ ಪೀಠಪೂಜೆಯಾಗಿ ಮಂಗಳಾರತಿಯಾಗುವುದು. ರಾತ್ರೆ ಮಹಾಪೂಜೆ, ಪಲ್ಲವ ಪೂಜೆ, ಭೂತ ಬಲಿ, ಶಯನ, ಕವಾಟ ಬಂಧನ ನಡೆಯುತ್ತದೆ.