ಬಂಟ್ವಾಳ : ತಾಲೂಕು ಚೆನ್ನೈತ್ತೋಡಿ ಗ್ರಾಮದ ಮಾವಿನಕಟ್ಟೆ ನಿವಾಸಿ ದಿ.ಹರೀಶ್ಶೆಟ್ಟಿ ಅವರ ಪುತ್ರಿ ಕು|ಆಶ್ವೀಜಾ(21) ಎ.3ರಿಂದ ನಾಪತ್ತೆಯಾಗಿದ್ದಾರೆ.

ಅಂದು ಬೆಳಗ್ಗೆ ಪೊಳಲಿ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವಳು ಮನೆಗೆ ಹಿಂತಿರುಗಿ ಬಾರದೆ ನಾಪತ್ತೆಯಾಗಿರುವಳು. ಆಕೆಯ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ. ತನ್ನ ನೆರೆಮನೆಯ ಸಂತೋಷ ಎಂಬಾತನ ಜೊತೆ ತೆರಳಿರಬೇಕೆಂದು ಶಂಖಿಸಲಾಗಿದೆ ಎಂದು ಆಕೆಯ ತಾಯಿ ಸುಂದರಿ ಪುಂಜಾಲಕಟ್ಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.
ಆಶ್ವೀಜಾ ಸುಮಾರು 5 ಅಡಿ 4ಇಂಚು ಎತ್ತರವಿದ್ದು ಸಾಧಾರಣ ಮೈಕಟ್ಟು ಹೊಂದಿದ್ದಾಳೆ. ಉದ್ದ ಮುಖ, ಎಣ್ಣೆಕಪ್ಪು ಮೈ ಬಣ್ಣವಿದ್ದು ದ್ವಿತೀಯ ಪಿಯುಸಿ ವಿದ್ಯಾರ್ಹತೆ ಇದೆ. ಕನ್ನಡ , ತುಳು ಭಾಷೆ ಬಲ್ಲವಳಾಗಿದ್ದಾಳೆ.
