ಶ್ರಮಿಕ ಸಂತ ಜೋಸೆಫರ ಚರ್ಚ್ ವಾಮಂಜೂರು ಇಲ್ಲಿ ಯೇಸುಕ್ರಿಸ್ತರು ಮರಣ ಹೊಂದಿದ ದಿನ ಗುಡ್ ಫ್ರ್ಯೇಡೇ ದಿನವನ್ನಾಗಿ ಆಚರಿಸಲಾಯಿತು. ಯೇಸುಕ್ರಿಸ್ತರ ಕಷ್ಟಗಳನ್ನು ಬಿಂಬಿಸುವ 14 ಸ್ತಾನಗಳ ಎದುರು ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ತದನಂತರ ಶ್ರೀಯುತ ವಿಲ್ಫ್ರೆಡ್ ಫೆರ್ನಾಂಡಿಸ್ ಇವರು ಚರ್ಚ್ಗೆ ದಾನವಾಗಿ ನೀಡಿದ ಯೇಸುಕ್ರಿಸ್ತರ ಪ್ರತಿಮೆಯನ್ನು ವಂ/ ಸಿಪ್ರೀಯಾನ್ ಪಿಂಟೋರವರು ಆಶೀರ್ವಚನ ಮಾಡಿ ಅನಾವರಣಗೊಳಿಸಿದರು. ಈಸಂದರ್ಭದಲ್ಲಿ ಸಹಾಯಕ ಧರ್ಮಗುರುಗಳಾದ ವಂ/ಮೆಲ್ವಿನ್ ಡಿ.ಸೋಜ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ರೋಶನ್ ಎಮ್ ಕಾಮತ್,ಕಾರ್ಯದರ್ಶಿ ಜೋಕಿಂ ಡಿ ಸೋಜ ಉಪಸ್ಥಿತರಿದ್ದರು. ನಂತರ ಪ್ರಾರ್ಥನಾ ವಿಧಿ ಹಾಗೂ ಶಿಲುಬೆಯ ಆಶೀರ್ವಚನವನ್ನು ಧರ್ಮಗುರುಗಳು ಜನತೆಗೆ ಸಂದೇಶ ನೀಡಿದರು.


.ದೇವರೊಬ್ಬನೆ ನಾವು ಹಲವು. ದೇವರೊಬ್ಬರಾದರು ಅವರಲ್ಲಿ ಮೂರು ಜನ ಇದ್ದಾರೆ.ಪಿತ, ಸುತ,ಮತ್ತು ಪವಿತ್ರ ಆತ್ಮ: ಪಿತನು ಲೋಕ ಕಲ್ಯಾಣಕ್ಕಾಗಿ ತನ್ನ ಮಗನನ್ನು ಈ ಭೂಲೋಕಕ್ಕೆ ಕಳಿಸುತ್ತಾನೆ. ಪವಿತ್ರ ಆತ್ಮನಿಂದ ಗರ್ಭವತಿಯಾದ ಮಾತೆ ಮರಿಯಮ್ಮಳು ಪಿತನ ಮಗನಾದ ಯೇಸು ಕ್ರಸ್ತನಿಗೆ ಜನ್ಮ ನೀಡುತ್ತಾಳೆ. ಜೋಸೆಫ ಸಾಕು ತಂದೆಯಾಗಿ ಮಾತೆ ಮರಿಯಮ್ಮನನ್ನು ಹಾಗೂ ಯೇಸುವನ್ನು ಅತ್ಯಂತ ಪ್ರೀತಿಯಿಂದ ನೋಡುತ್ತಾನೆ. ಯೇಸು 33 ವರ್ಷ ಈ ಭೂಲೋಕದಲ್ಲಿ ನೆಲೆಸುತ್ತಾನೆ. ಅನೇಕ ಪವಾಡಗಳನ್ನು ಮಾಡಿ ಎಲ್ಲರ ಹ್ರದಯಗಳಲ್ಲಿ ನೆಲೆಸುತ್ತಾನೆ. 12 ಮಂದಿ ಶಿಷ್ಷರನ್ನು ಪಡೆದ ಯೇಸು ಅನೇಕ ರೋಗ ರುಜನಗಳನ್ನು ಗುಣಪಡಿಸುತ್ತಾನೆ ಸತ್ತವರನ್ನು ಜೀವಂತಗೊಳಿಸಿ ಬಡವರಿಗೆ ಆಶ್ರಯದಾತನಾಗಿ ಮಕ್ಕಳನ್ನು ಪ್ರೀತಿಯಿಂದ ಕಂಡು ಜನರಿಗೆ ದೇವರ ಸಾಮ್ರಾಜ್ಯದ ಬಗ್ಗೆ ಹರಿವು ಮೂಡಿಸುತ್ತಾನೆ ಇದನ್ನೆಲ್ಲಾ ವೀಕ್ಷಸಿದ ಕೆಲವು ಜನರು ಯೇಸುವನ್ನು ಹೇಗಾದರೂ ಮಾಡಿ ಸಾಯಿಸಬೇಕೆಂದು ಪಿತೂರಿಯನ್ನು ನಡೆಸುತ್ತಾರೆ. ಯೇಸುವಿನ ಶಿಷ್ಯರಲ್ಲಿ ಒಬ್ಬನಾದ ರುದಾಸ್ ಇಸ್ಕಾಲಿಯಾತ್ಗೆ ಹಣದ ಅಮಿಷ ಒಡ್ಡಿ ಯೇಸುವನ್ನು ಹಿಡಿಯಲು ಬಲೆಬೀಸುತ್ತಾನೆ ತನಗೆ ಶಿಲುಬೆಯ ಮರಣ ಆಗಲಿರುವುದು ಎಂದು ಅರಿತ ಯೇಸು ನಲವತ್ತು ದಿವಸಗಳ ಉಪವಾಸ ಪ್ರರ್ಥನೆಗಳನ್ನು ಕೈಗೊಳ್ಳುತ್ತಾನೆ. ಶುಭ ಗುರುವಾರದಂದು ತನ್ನ ಶಿಷ್ಯರೊಡಗೂಡಿ ಭೋಜನ ಮಾಡುವಾಗ ನಿಮ್ಮಲ್ಲಿಯೇ ಒಬ್ಬ ನನ್ನನ್ನು ಕಟುಕರಿಗೆ ಕೊಡುವನು ಎಂಬ ಘೋರ ಸತ್ಯವನ್ನು ಬಹಿರಂಗಪಡಿಸುತ್ತಾನೆ. ಈಗೆ ಯೇಸು ಹೇಳಿದ ಪ್ರಕಾರ ಎಲ್ಲಾ ನಡೆದು ಪಿಲಾತನು ಜನರ ಆಕ್ರಂಧನಕ್ಕೆ ಸೋತು ಯೇಸುವಿಗೆ ಶಿಲುಬೆಯ ಮರಣವನ್ನು ಘೋಷಿಸುತ್ತಾನೆ. ಈಸ್ಟರಿನ ಮುಂಚಿನ ದಿನ ಅಂದರೆ ಶುಕ್ರವಾರ ಶಿಲುಬೆಯನ್ನು ಹೊತ್ತ ಯೇಸುವು ಕಾಲ್ಪರಿ ಪರ್ವತದಲ್ಲಿ ತಾನು ಹೊತ್ತು ತಂದ ಶಿಲುಬೆಯಲ್ಲೇ ಮಧ್ಯಾಹ್ನ ಸುಮಾರು ಮೂರು ಗಂಟೆಗೆ ತನ್ನ ಪ್ರಾಣವನ್ನು ನೀಡುತ್ತಾನೆ. ಜಯಕಾರ ಹಾಕಿದ ಜನರೇ ಕೊನೆಗೆ ಯೇಸುವಿಗೆ ಇಂತಹ ಕ್ರೂರ ಮರಣವನ್ನು ವಿಧಿಸುತ್ತಾರೆ .ದೇವರ ರಜ್ಯವನ್ನು ಸ್ಥಾಪಿಸಲು ಬಂದ ಯೇಸು ಸತ್ತ ದಿನವಾದ ಈ ಶುಭ ಶುಕ್ರವಾರ ವನ್ನು ( ಗುಡ್ ಫ್ರೈಡೆ) ಈದಿನ ಕ್ರೆಸ್ತರಿಗೆ ಅತ್ಯಂತ ಪವಿತ್ರ ದಿನವಾಗಿದೆ. ಅಂದು ಚರ್ಚ್ನಲ್ಲಿ ಬಲಿಪೂಜೆ ಇರುವುದಿಲ್ಲ ಆದರೆ ವಿಶೇಷ ಪ್ರಾರ್ಥನೆ ಹಾಗೂ ಯೇಸುವಿನ 14 ಸ್ತಾನಗಳನ್ನು ನೆನೆದು ಪ್ರಾರ್ಥಿಸುವರು. ಶಿಲುಬೆಗೆ ನಮನ ಹಾಗೂ ಪರಮ ಪ್ರಸಾದವನ್ನು ಸ್ವೀಕರಿಸಿ ಉಪವಾಸ ಧಾನ ಧರ್ಮವನ್ನು ಮಾಡಿ ಕರಾಳ ಶುಕ್ರವಾರವನ್ನಾಗಿ ಆಚರಿಸುವರು.







