ಮೂಡುಬಿದಿರೆ: ಇಲ್ಲಿನ ತ್ರಿಭುವನ್ ಅಟೋ ಮೊಬೈಲ್ ಸ್ಪೋಟ್ರ್ಸ್ ಕ್ಲಬ್ , ಬೆದ್ರ ಅಡ್ವೆಂಚರ್ ಕ್ಲಬ್ , ಜೇಸೀಐ, ಇಂಡಿಯನ್ ಮೊಟಾರ್ ಸ್ಪೋಟ್ರ್ಸ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಅಟೋಕ್ರಾಸ್ 15, ಮತ್ತು ಅಟೋ ಎಕ್ಸಪೋ ಎಂಬ ಮೋmರ್ ಸ್ಪೋಟ್ರ್ಸ್ ಮೀಟ್ ಹಾಗೂ ಮೊಟಾರ್ ಶೋ ಇದೇ ಬರುವ ಎ4 ಮತ್ತು 5ರಂದು ಕಲ್ಲಬೆಟ್ಟು ಮಾರಿಗುಡಿ ಬಳಿ ಪಂಚರತ್ನ ಮೈದಾನದಲ್ಲಿ ನಡೆಯಲಿದೆ ಎಂದು ತ್ರಿಭುವನ್ ಅಟೋ ಮೊಬೈಲ್ ಸ್ಪೋಟ್ರ್ಸ್ ಕ್ಲಬ್ನ ಸ್ಪರ್ಧಾ ಸಂಚಾಲಕ ಅಭಿಜಿತ್ ತಿಳಿಸಿದ್ದಾರೆ.

ಪ್ರೆಸ್ ಕ್ಲಬ್ನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎ4ರಂದು ಅಟೋಕ್ರಾಸ್ 15 ಸ್ಪರ್ಧೆಯನ್ನು ರಾಜ್ಯ ಯುವಜನ ಸೇವೆ, ಕ್ರೀಡೆ ಮತ್ತು ಮೀನುಗಾರಿಕೆ ಸಚಿವ ಕೆ.ಅಭಯಚಂದ್ರ ಜೈನ್ ಉದ್ಘಾಟಿಸಲಿದ್ದಾರೆ.
ದ್ವಿಚಕ್ರ ಮತ್ತು ಚತುಶ್ಚಕ್ರವಾಹನಗಳ ಈ ರೇಸ್ ಸ್ಪರ್ಧೆವಿವಿಧ ವಿಭಾಗಗಳಲ್ಲಿ ನಡೆಯಲಿದೆ. ಪ್ರತಿಷ್ಠಿತ ದ್ವಿಚಕ್ರ ಮತ್ತು ಚತುಶ್ಚಕ್ರವಾಹನಗಳ ಉತ್ಪಾದಕ ಕಂಪೆನಿಗಳವರು, ಹಣಕಾಸು ನೆರವಿನ ಸಂಸ್ಥೆಗಳು, ಉತ್ಪನ್ನಗಳ ಪ್ರದರ್ಶನ, ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಎ4 ರ ಅಪರಾಹ್ನ 3ರಿಂದ ಕೋಸ್ಟಲ್ ಬೈಕರ್ಸ್ ಅವರ ಸೂಪರ್ ಬೈಕ್ ಶೋ, ಮೈಸೂರಿನ ಎಕ್ಸ್ರೈಡರ್ಸ್ ಅವರಿಂದ ಬೈಕ್ ಸ್ಟಂಟ್ ನಡೆಯಲಿದೆ.
250ಕ್ಕೂ ಅಧಿಕ ಮಂದಿ ಸ್ಪರ್ಧಿಗಳು, 30 ಸಾವಿರಕ್ಕೂ ಅಧಿಕ ಪ್ರೇಕ್ಷಕರ ನಿರೀಕ್ಷೆ ಇದೆ . ಕಳೆದ ಸಾಲಿನ ರಾಷ್ಟ್ರೀಯ ಚಾಂಪಿಯನ್ ಕೆ.ಪಿ. ಅರವಿಂದ್ ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ಆಕರ್ಷಣೆ ಎಂದವರು ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಕುಲದೀಪ್ ಚೌಟರ ಅರಮನೆ, ಪ್ರತಾಪ್ ಕುಮಾರ್, ಜೇಸೀ ಅಧ್ಯಕ್ಷ ಧಿರೇಂದ್ರ, ಹಮೀದ್ ಉಪಸ್ಥಿತರಿದ್ದರು.
