ಮೂಡುಬಿದಿರೆ: ಅಕಲಂಕ ಕಲಾ ಕ್ಷೇತ್ರ(ರಿ.)ವತಿಯಿಂದ ಕಲ್ಲಬೆಟ್ಟು ಎಂ.ಕೆ.ಶೆಟ್ಟಿ ಸೆಂಟ್ರಲ್ ಸ್ಕೂಲ್‍ನಲ್ಲಿ ಸನಿವಾಸ ಸಂಗೀತ ಶಿಕ್ಷಣಕ್ಕೆ ಅವಕಾಶವನ್ನು ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಎಸ್. ಪ್ರಸನ್ನ ಕುಮಾರ್ ಜೈನ್ ತಿಳಿಸಿದ್ದಾರೆ. ಪ್ರೆಸ್ ಕ್ಲಬ್‍ನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ಟೇಟ್ ಮತ್ತು ಸಿ.ಬಿ.ಎಸ್ಸಿ ಶಿಕ್ಷಣದ ಜತೆಗೆ 6ನೇ ತರಗತಿಯಿಂದ ಕರ್ನಾಟಕ ಸಂಗೀತ,ವೀಣೆ, ವಯೋಲಿನ್, ಮೃದಂಗ, ಕೊಳಲು ಮತ್ತು ಭರತನಾಟ್ಯದಲ್ಲಿ ನುರಿತ ಶಿಕ್ಷಕರಿಂದ ತರಬೇತಿ ನೀಡಲಾಗುತ್ತದೆ. ಆಹಾರ , ವಸತಿ ಜತೆಗೆ ಯೋಗ, ಸಂಸ್ಕ್ರತ ಪಾಠ, ಸಹಿತ ಜೀವನ ಮೌಲ್ಯ ಶಿಕ್ಷಣವನ್ನು ನೀಡಲಾಗುವುದು ಎಂದವರು ತಿಳಿಸಿದ್ದಾರೆ. ಆಸಕ್ತರು ಎ15ರೊಳಗೆ ಹೆಸರು ನೊಂದಾಯಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ 9448512160 ಸಂಪರ್ಕಿಸಬಹುದಾಗಿದೆ.
