ಚಿತ್ರ ಕಿಶೋರ್ ಪೆರಾಜೆ.
ಸುದ್ದಿ 9 ಬಂಟ್ವಾಳ.ಮಾ 24 ಎಲ್ಲರೂ ಜೀವಿಸುತ್ತಾರೆ. ಆದರೆ ಸಾರ್ಥಕತೆ ಇರುವುದು ಆತನ ಪ್ರತಿಭೆಗೆ ಜೀವನಾಡಿಯಾದಾಗ ಮಾತ.್ರ ಅದಕ್ಕಾಗಿ ಜೀವನವನ್ನು ಉಜ್ಜೀವನಗೊಳಿಸಬೇಕು ಎಂದು ಯಸ್.ಸಿ .ಡಿ.ಸಿ.ಸಿ ಬ್ಯಾಂಕ್ ನ ನಿವೃತ್ತ ಮೆನೇಜರ್ ಶ್ರೀ ನಾರಾಯಣ ಕಾಮತ್ ಮಾತನಾಡಿದರು.

ಅವರು ಇಲ್ಲಿನ ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಾಹಿತ್ಯ ಸಂಘದ ವತಿಯಿಂದ ನಡೆದ ಸಾಹಿತ್ಯ ಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಇಲ್ಲಿನ ಕಾಲೇಜಿನ ನೀತಿಯುತ ಸಂಸ್ಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಥಾಗೋಷ್ಟಿಯ ಅಧ್ಯಕ್ಷತೆ ವಹಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಕಾರ್ಯಕಾರಿಣಿ ಸದಸ್ಯರಾದ ಸುರೇಶ್ ಪರ್ಕಳ ಮಾತಾನಾಡಿ ವಾಸ್ತವಿಕತೆಯನ್ನು ಬಿಂಬಿಸುವ ಕಥೆಗಳು ಇಂದು ದುರ್ಲಭವಾಗಿದೆ.ಮನೆಗಳಲ್ಲಿ ಕಥೆ ಹೇಳುವುದೇ ಇಲ್ಲವಾದ್ದರಿಂದ ನೈತಿಕ ಪ್ರಜ್ಞೆ,ಸಾಮಾಜಿಕ ಮೌಲ್ಯಗಳನ್ನು ಇಂದಿನ ಸಮಾಜದಲ್ಲಿ ಮೂಡಿಸುವುದೇ ಕಷ್ಟ.ಭಾವನೆಗಳನ್ನು ತುಂಬಿ ಕೌತುಕವನ್ನು ಮೂಡಿಸುವ ಪರಿಣಾಮಕಾರಿ ಪ್ರಭಾವ ಬೀರುವಂತಿರಬೇಕು. ಹಾವಭಾವ, ಏರಿಳಿತ,ಶಬ್ದಗಳಲ್ಲಿ ಅಂತರ,ಇವೆಲ್ಲವೂ ಕಥಾಕಥನದಲ್ಲಿರಬೇಕು. ಇದಕ್ಕಾಗಿ ಪುಸ್ತಕಗಳ ಅಧ್ಯಯನ ಮಾಡಬೇಕು.ಸರಳ ಪುಸ್ತಕಗಳಿಂದ ಗಹನ ವಿಷಯದೆಡೆಗೆ ಮನಸ್ಸನ್ನು ವಾಲಿಸಬೇಕು.
ಕಾರ್ಯಕ್ರಮದಲ್ಲಿ ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿದ ಸಮಾಜಶಾಸ್ತ್ರ ಉಪನ್ಯಾಸಕ ಹಾಗೂ ಯುವ ಸಾಹಿತಿ ಹಾಗೂ ಕವಿಯಾದ ರಾಜರಾಮ ವರ್ಮ ಮಾತಾನಾಡಿ ಕವಿತೆಗಳ ಕವನಗಳ ಹಿನ್ನೆಲೆಯನ್ನು ತಿಳಿದು ಅದನ್ನು ಅಥೈಸಿಕೊಂಡರೆ ಮಾತ್ರ ಕವನದ ಬೆಲೆ ತಿಳಿಯಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಾಡು ಹರಟೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಮ ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಣ ಶಿಕ್ಷಕರಾದ ರಾದಕೃಷ್ಣ ಅಡ್ಯಂತಾಯ ವಹಿಸಿದರು.
ವಿದ್ಯಾಥರ್ಿಗಳಾದ ಚಿತ್ರಾಕ್ಷಿ ಕೆ, ,ಶಿವಪ್ರಸಾದ್, ನಿತಿನ್, ಅಕ್ಷತಾ ಕೆ, ನವೀನ , ಪ್ರವೀಣ , ಅಕ್ಷತಾ ಕೆ, ಚಿತ್ರಾಕ್ಷಿ, ರಶ್ಮಿ, ಲಾವಣ್ಯ ಹಷರ್ಿತಾ ಪ್ರಶಾಂತ ನಿವೇದಿತಾ ಪವಿತ್ರ ರಶ್ಮಿತಾ ಶ್ವೇತಾ ಕೆ ಅಕ್ಷಿತಾ ಕೃತಿ ಉದಯ ಮಾನಸ ಗೋಷ್ಠಿಯಲ್ಲಿ ಕಥೆ ಕವಿತೆ ಹಾಡು ಹರಟೆ ಮಂಡಿಸಿದರು,..
ವೇದಿಕೆಯಲ್ಲಿ ಪ್ರಾಚಾರ್ಯರಾದ ಕೃಷ್ಣಪ್ರಸಾದ ಕೆ ಯನ್, ಹಾಗೂ ಕನ್ನಡ ಉಪನ್ಯಾಸಕರಾದ ಯತಿರಾಜ್, ಉಪಸ್ಥಿತರಿದ್ದರು. ಸೌಜನ್ಯ ಶೈನಾಕ್ಷಿ ಮಧುಶ್ರೀ ಮೋಹಿನಿ ಕಾರ್ಯಕ್ರಮ ನಿರೂಪಿಸಿದರು .


