ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ನಾವೂರು ಸಮೀಪದ ಕೂಡಿಬೈಲು-ಸುಲ್ತಾನ್‍ನಗರ ಎಂಬಲ್ಲಿ ಇದೇ 26ರಿಂದ ಮೊದಲ್ಗೊಂಡು 28ರತನಕ ಮೂರು ದಿನ ಉರೂಸ್ ಕಾರ್ಯಕ್ರಮ ಮತ್ತು ಧಾರ್ಮಿಕ ಉಪನ್ಯಾಸ ನಡೆಯಲಿದೆ.
ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಸೀದಿ ಅಧ್ಯಕ್ಷ ಎಂ.ಎ. ಬಶೀರ್ ಅಧ್ಯಕ್ಷತೆ ವಹಿಸುವರು. ಸಯ್ಯಿದ್ ಫಕ್ರುದ್ದೀನ್ ಹಸನಿ ಖಾದಿರಿ ದಾರಿಮಿ ತಂಙಳ್ ಇವರಿಂದ ದುವಾಶಿರ್ವಚವನ, ಕಾರಗೋಡು-ಪೊವ್ವಲ್ ಮಸೀದಿ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಲೆ ಇವರಿಂದ ಮುಖ್ಯಭಾಷಣ ನಡೆಯಲಿದೆ.

By Suddi9

Leave a Reply

Your email address will not be published. Required fields are marked *