ಬಂಟ್ವಾಳ: ತಾಲ್ಲೂಕಿನ ಮೆಲ್ಕಾರ್ ಸಮೀಪದ ಬೋಗೋಡಿ ಎಂಬಲ್ಲಿ ಕಳೆದೆರಡು ದಿನಗಳ ಹಿಂದೆ ರಾತ್ರಿ ನೇಣು ಬಿಗಿದು ಶಂಕಾಸ್ಪದ ರೀತಿಯಲ್ಲಿ ವಿವಾಹಿತ ಮಹಿಳೆ ಆಯಿಷಾತುಲ್(22) ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಆಕೆಯ ಪತಿ ಇರ್ಫಾ ನ್  ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ.
ಕಳೆದ ಮೂರು ವರ್ಷಗಳ ಹಿಂದೆ ಇರ್ಫಾನ್  ಸ್ಥಳೀಯ ಗೂಡಿನಬಳಿ ನಿವಾಸಿ ಇಬ್ರಾಹಿಂ ಎಂಬವರ ಪುತ್ರಿ ಆಯಿಷಾತುಲ್ ಇವರನ್ನು ವಿವಾಹ ಮಾಡಿ ಕೊಡಲಾಗಿದ್ದು, ಒಟ್ಟು ರೂ 2ಲಕ್ಷ ನಗದು ಸಹಿತ 17 ಪವನ್ ಚಿನ್ನಾಭರಣ ನೀಡಲಾಗಿತ್ತು. ಈ ನಡುವೆ ಮತ್ತೆ ಮೂರು ಪವನ್ ಚಿನ್ನಾಭರಣ ತರುವಂತೆ ಆಗ್ರಹಿಸಿ ಇರ್ಫಾನ್  ಮತ್ತು ಆತನ ತಾಯಿ ಮಮ್ತಾಜ್ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಒಂದು ವರ್ಷ ಎರಡು ತಿಂಗಳು ಹರೆಯದ ಪುಟ್ಟ ಹೆಣ್ಣು ಮಗು ಹೊಂದಿರುವ ಆಯಿಷಾತುಲ್ ಮೃತ ದೇಹವನ್ನು ನಗರ ಪೊಲೀಸರ ಬಿಗಿ ಭದ್ರತೆಯಲ್ಲಿ ಹುಟ್ಟೂರು ಗೂಡಿನಬಳಿ ಮಸೀದಿ ಬಳಿ ಮಂಗಳವಾರ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *