ಬಂಟ್ವಾಳ : ಮಾ.24 ರಂದು ಸಂಜೆ 7.00ಕ್ಕೆ ಬಿ.ಸಿ.ರೋಡ್ ಬಸ್ ಸ್ಟಾಂಡ್ ನಲ್ಲಿ ರಾಜ್ಯ ಸರಕಾರದ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಡಿ.ಕೆ.ರವಿರವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಕಾರ್ಯಕ್ರಮ ಜರಗಿತು.
KAR_5954
ಮಾ .16 ರಂದು ಡಿ.ಕೆ.ರವಿಯವರ ಸಾವು ಜರಗಿದ್ದು ಈ ಸುದ್ದಿ ಇಡೀ ರಾಜ್ಯಕ್ಕೆ ದಿಗ್ಭ್ರಮೆ ಉಂಟು ಮಾಡಿದ್ದು , ರಾಜ್ಯ ಸರಕಾರ ಮಾತ್ರ ಈ ಪ್ರಕರಣವನ್ನು ಆತ್ಮಹತ್ಯೆ ಎಂದು ಬಿಂಬಿಸಲು ಹೊರಟಿದ್ದು , ಇದರಿಂದ ರಾಜ್ಯ ಸರಕಾರದ ಮೇಲೆ ಜನರಿಗೆ ಅನುಮಾನ ಮೂಡುವಂತಾಗಿದೆ . ರವಿಯವರ ಬಾಲ್ಯ ದಿನಗಳಿಂದ ಹಿಡಿದು ಇತ್ತೀಚಿನ ವರೆಗೆ ಅವರು ನಡೆದು ಬಂದ ದಾರಿ , ಅಧಿಕಾರದಲ್ಲಿ ಇರುವಾಗ ಭ್ರಷ್ಟಾಚಾರಗಳ ವಿರುದ್ಧ ನೀಡುವ ದಿಟ್ಟ ಕ್ರಮ , ಜನಸಾಮಾನ್ಯರ ಜೊತೆ ಅವರು ನಡೆದುಕೊಳ್ಳುವ ಒಳ್ಳೆಯ ರೀತಿ , ಈ ಬಗ್ಗೆ ಜನರೇ ಪ್ರತ್ಯಕ್ಷ ಸಾಕ್ಷಿಯಾಗಿ ಹೇಳಿಕೆ ನೀಡುತ್ತಿರುವಾಗ ಅವರ ಸಾವು ಆತ್ಮಹತ್ಯೆಯಲ್ಲ , ಅದು ಒಂದು ವ್ಯವಸ್ಥಿತ ಷಡ್ಯಂತ್ರದಿಂದ ನಡೆದ ಕೊಲೆ ಎಂಬ ಅನುಮಾನ ಮೂಡುತ್ತಿದೆ . ರಾಜ್ಯ ಸರಕಾರ ಕೊನೆಗೂ ಜನರ ಒತ್ತಾಸೆಗೆ ಮಣಿದು , ಸಿ.ಬಿ.ಐ. ಗೆ ಈ ಪ್ರಕರಣವನ್ನು ನೀಡಿದ್ದು , ಸಿ.ಬಿ.ಐ ಶೀಘ್ರದಲ್ಲಿ ಈ ಪ್ರಕರಣವನ್ನು ಬೇಧಿಸಿ, ರವಿಯವರ ಆತ್ಮಕ್ಕೆ ಶಾಂತಿ ಸಿಗುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದು ಹಿಂದೂ ಜಾಗರಣಾ ವೇದಿಕೆಯ ರವಿರಾಜ್ ಬಿ.ಸಿ.ರೋಡ್ ಇವರು ಹೇಳಿ ಶ್ರದ್ಧಾಂಜಲಿ ಅಪರ್ಿಸಿದರು.

ಈ ಸಂದರ್ಭದಲ್ಲಿ ಬಿ.ಸಿ.ರೋಡ್ ಜನಜಾಗೃತಿ ಸಮಿತಿ ಅಧ್ಯಕ್ಷ ಜಗನ್ನಾಥ , ಬಂಟ್ವಾಳ ಪುರಸಭೆಯ ಮಾಜಿ ಶಾಸಕ ಶ್ರೀನಿವಾಸ ಮಲ್ಲಿ , ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರಾದ ಚಂದ್ರಶೇಖರ ಕಲಾಯಿ , ಸಂತೋಷ ಬೊಂಡಾಲ ಜಗದೀಶ ಕಾಮಾಜೆ , ಶಶಿ ಕಾಮಜೆ, ಶರಣ್, ರತೀಶ್ , ಶೈಲೇಶ್ ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು

By Suddi9

Leave a Reply

Your email address will not be published. Required fields are marked *