ಬಂಟ್ವಾಳ : ಶಂಭೂರು ಗ್ರಾಮದ ಶಂಭೂರು ಮತ್ತು ನಾಯಿಲ ಶಾಲೆಯಲ್ಲಿ ತುಳು ಲಿಪಿ ಕಲಿತ 6ಮತ್ತು 7 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿ ಗಳಿಗೆ ತು ಳು ಸಾಹಿತ್ಯ ಅಕಾಡೆಮಿ ಕೊಡಮಾಡಿದ ಪ್ರಮಾಣ ಪತ್ರವನ್ನು ಬಂಟ್ವಾಳ ಕ್ಷೇತ್ರ ಶೀಕ್ಷಣಾಧಿಕಾರಿ ಶೇಷಶಯನ ಕಾರಿಂಜ ವಿತರಿಸಿದರು .

ವಿತರಣೆಗೆ ಮೊದಲು ತುಳು ಲಿಪಿಯಲ್ಲಿ ಜೋಕು ಲೇ ಎಂಚ ಉಲ್ಲರ್ ಎಂದು ಕರಿಹಲಗೆಯಲ್ಲಿ ಬರೆದಾಗ ಮಕ್ಕಳು ಗಟ್ಟಿಯಾಗಿ ಓದಿದರು . ಶಂಭೂರಿನ 54ಮತ್ತು ನಾಯಿಲದ 18 ಮಂದಿ ವಿದ್ಯಾರ್ಥಿಗಳಿಗೆ ವಿತರಿಸಿ ತು ಳು ಲಿಪಿಯನ್ನು ಜೀವನದುದ್ದಕ್ಕು ಬಳಸಿ ಬೆಳೆಸಿ ಎಂದು ಕರೆ ನೀಡಿದರು . ಪ್ರಥಮ ,ದ್ವಿತಿಯ ಸ್ಥಾನ ಗಳಿಸಿದವರಿಗೆ ತು ಳು ಲಿಪಿ ಶಿಕ್ಷಕ ಬಿ.ತಮ್ಮಯ್ಯ ಪುಸ್ತಕ ಬಹುಮಾನ ನೀಡಿದರು . ಇನ್ನೊಬ್ಬ ತು ಳು ಲಿಪಿ ಶಿಕ್ಷಕ ದಿನಕರ್ , ತು ಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್ ಸಭೆಯಲ್ಲಿ ಉಪಸ್ಥಿತರಿದ್ದರು . ಮುಖ್ಯ ಶಿಕ್ಷಕಿ ಸ್ವಾಗತಿಸಿ , ವಂದಿಸಿದರು.
