ಬಂಟ್ವಾಳ : ನಿವೃತ್ತ ಯೋಧರಿಗೆ ಸಿಗಬೇಕಾದ ಎಲ್ಲಾ ಸವಲತ್ತುಗಳು ಸಿಗುತ್ತಿಲ್ಲ , ಆರೋಗ್ಯ ರಕ್ಷಣೆ , ಪಿಂಚಣಿ , ಪುರ್ನ ನಿಯುಕ್ತಿ, ಪುನರ್ವಸತಿ, ಮುಂತಾದ ಹಲವಾರು ಬೇಡಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು .

ನಿವೃತ್ತ ಸೈನಿಕರಿಗೆ ದೊರೆಯುತ್ತಿರುವ ಎಲ್ಲಾ ಸವಲತ್ತುಗ ಳನ್ನು ಮಾಜಿ ಅರೆಸೈನಿಕ ಪಡೆಗಳಿಗೆ ಕೂಡ ಕೊಡಬೇಕೆಂಬ ಬೇಡಿಕೆಗಳೊಂದಿಗೆ ರಾಜ್ಯ ಸರಕಾರದೊಂದಿಗೆ ಹಲವಾರು ಸುತ್ತಿನ ಮಾತುಕತೆ ನಡೆದಿರುತ್ತದೆ ಎಂದು ಬೆಂಗಳೂರು ಗಡಿಭದ್ರತಾ ಪಡೆ ಯೋಧರ ಕ್ಷೇಮಾಭಿವೃದ್ಧಿ ಸಂಘ ರಾಜ್ಯಾಧ್ಯಕ್ಷ ಬಿ.ಚಂದಪ್ಪ ಮೂಲ್ಯ ಮಾತನಾಡಿದರು .
ಅವರು ಬಿ.ಸಿ.ರೋಡ್ ಹೋಟೇಲ್ ರಂಗೋಲಿಯಲ್ಲಿ ಗಡಿಭದ್ರತಾ ಪಡೆ ಯೋಧರ ಕ್ಷೇಮಾಭಿವೃದ್ಧಿ ಸಂಘ ಕರಾವಳಿ ಘಟಕದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡುತ್ತುದ್ದರು . ವೇದಿಕೆಯಲ್ಲಿ ಬಿ.ಶಿವರಾಮ್ , ಎ.ಸುರೇಶ್ ನಾಯಕ್ , ನಂದಕುಮಾರ್ , ವಾಸಪ್ಪ ನಾಯಕ್ ಮತ್ತು ದಾಮೋದರ್ ಪಿ. ಉಪಸ್ಥಿತರಿದ್ದರು . ಕರಾವಳಿ ಘಟಕದ ಅಧ್ಯಕ್ಷ ಪುರುಷೋತ್ತಮ ಪ್ರಾಸ್ತಾವಿಸಿ , ಸ್ವಾಗತಿಸಿದರು .
