ಗ್ರಾಮದೆಡೆಗೆ ಬಿಜೆಪಿ ನಡಿಗೆ: ಬಿಜೆಪಿ ಪ್ರಮುಖರಿಂದ ಗ್ರಾಮಕ್ಕೆ ಪಾದಯಾತ್ರೆ
ಸುದ್ದಿಪೊಳಲಿ (ಜನವರಿ.14): ಕಾಂಗ್ರೆಸ್ ಸರಕಾರದ ದುರಾಡಳಿತವನ್ನು ಜನರ ಮುಂದೆ ಇಡಲು ಮತ್ತು ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಜನತೆಗೆ ತಿಳಿಸಲು ಹಾಗೂ ಸದರ್ಾರ್ ವಲ್ಲಭಾಭಾಯ್ ಪಟೇಲರ ಬೃಹತ್ ಲೋಹದ ಪ್ರತಿಮೆಗೆ ಲೋಹ ಸಂಗ್ರಹ ಅಭಿಯಾನಕ್ಕಾಗಿ ಬಿಜೆಪಿ ವತಿಯಿಂದ `ಗ್ರಾಮದೆಡೆಗೆ ಬಿಜೆಪಿ ನಡಿಗೆ’ ಎಂಬ ಬಿಜೆಪಿ ನಾಯಕರ ಪಾದಯಾತ್ರೆ ಕಾರ್ಯಕ್ರಮಕ್ಕೆ ಪೊಳಲಿಯ ರಾಜರಾಜೇಶ್ವರಿ ದೇವಳದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಬಿಜೆಪಿಯ ಜಿಲ್ಲಾಧ್ಯಕ್ಷ ಕೆ. ಪ್ರತಾಪ್ಸಿಂಹ ನಾಯಕ್ರವರು ರಾಜೇಶ್ ನಾಯಕ್ ಉಳಿಪಾಡಿಗುತ್ತು ಇವರಿಗೆ ಬಿಜೆಪಿ ಧ್ವಜ ನೀಡುವ ಮೂಲಕ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಮಕರ ಸಂಕ್ರಮಣದ ಶುಭ ಅವಸರದಲ್ಲಿ ಇಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಕತ್ತಲಿನಿಂದ ಬೆಳಕಿನೆಡೆಗೆ ಎಂದು ಸಾರುವ ಈ ಹಬ್ಬದಂದು ದೇಶದಲ್ಲಿ ಕಾಂಗ್ರೆಸ್ನಿಂದ ಆವರಿಸಿರುವ ಕತ್ತಲನ್ನು ಹೋಗಲಾಡಿಸಿ ಬೆಳಕನ್ನು ತರುವ ಉದ್ದೇಶ ಈ ಕಾರ್ಯಕ್ರಮದಿಂದ ಇದೆ. ನರೇಂದ್ರ ಮೋದಿಯವರನ್ನು ಭಾರತದ ಪ್ರಧಾನಿಯನ್ನಾಗಿ ಮಾಡಲು, ಭ್ರಷ್ಟ ಕಾಂಗ್ರೆಸ್ಸನ್ನು ದೇಶದಿಂದ ಕಿತ್ತೊಗೆದು ಸಮೃದ್ಧ ಭಾರತವನ್ನು ಕಟ್ಟವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ನಂತರ ಮಾತಾಡಿದ ಅವರು ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ದಿನನಿತ್ಯದ ಹಗರಣಗಳ ಸುಳಿಯಲ್ಲಿ ಸಿಲುಕಿರುವುದರಿಂದ ಜತೆಗೆ ತನ್ನ ವಿನಾಶ ಕಾಲದ ವಿಪರೀತ ಬುದ್ಧಿ ಎನ್ನುವಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದ್ದು, ಜನರು ರೋಸಿ ಹೋಗುತ್ತಿದ್ದಾರೆ. ಜಿಲ್ಲೆಯ ಕೃಷಿಕರ ಜೀವನಾಡಿಯಾಗಿರುವ ಅಡಿಕೆಯನ್ನು ನಿಷೇಧಗೊಳಿಸಲು ಹುನ್ನಾರ ನಡೆಯುತ್ತಿದೆ. ಅಲ್ಲದೆ ದೇಶದ ಭದ್ರತೆಯನ್ನು ಕಾಪಾಡಲು ಕಾಂಗ್ರೆಸ್ ಸದಾ ವಿಫಲತೆಯನ್ನು ಕಾಣುತ್ತಿದೆ. ಬಿಜೆಪಿಯ ನಾಯಕತ್ವದ ಕೊರತೆಯಿಂದ ಮಾತ್ರ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿತು. ಆದರೆ ಆಡಳಿತದಲ್ಲಿ ಹಿಡಿತ ಸಾಧಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದ್ದು ಜನರು ರೋಸಿಹೋಗಿದ್ದಾರೆ ಎಂದು ಕಾಂಗ್ರೆಸ್ ಸರಕಾರವನ್ನು ಟೀಕಿಸಿದರು.
ಮುಂದೆ ಮಾತನಾಡಿದ ಅವರು ಅನ್ನ ಭಾಗ್ಯ ಯೋಜನೆಯಿಂದ ಬಡವರಿಗೆ ಲಾಭವಾಗುವ ಕಾಳಸಂತೆಕೋರರಿಗೆ ವರವಾಗಿದೆ. ಸಿಇಟಿ ಗೊಂದಲದಿಂದ ವಿದ್ಯಾಥರ್ಿಗಳ ಭವಿಷ್ಯದ ಜತೆ ಸಕರ್ಾರ ಚೆಲ್ಲಾಟವಾಡುತ್ತಿದೆ. ಮೂಢನಂಬಿಕೆ ಪ್ರತಿಬಂಧಕ ಕಾನೂನು, ಅಹಿಂದ ವಿದ್ಯಾಥರ್ಿಗಳಿಗೆ ಪ್ರವಾಸ, ಕಬ್ಬು ಬೆಳೆಗಾರರ ಸಮಸ್ಯೆ ಮುಂತಾದ ಸಮಸ್ಯೆಗಳಿಂದ ರಾಜ್ಯದ ಜನರು ಬಳಲುತ್ತಿದ್ದಾರೆ. ಶಾದಿಭಾಗ್ಯ ಯೋಜನೆಯಿಂದ ಕಾಂಗ್ರೆಸ್ ಅಲ್ಪಸಂಖ್ಯಾತ ಸಮುದಾಯದವರನ್ನು ಓಟ್ಬ್ಯಾಂಕನ್ನಾಗಿ ಪರಿವತರ್ಿಸುತ್ತಿದೆ. ಅಲ್ಲದೆ ಗೋಹತ್ಯೆ ನಿಷೇಧ ಕಾನೂನನ್ನು ಹಿಂತೆಗೆದ ಕಾಂಗ್ರೆಸ್ ಸರಕಾರ ಹಿಂದೂ ಧಮರ್ೀಯರ ಧಾಮರ್ಿಕ ಭಾವನೆಗಳೊಂದಿಗೆ ಆಟವಾಡುತ್ತಿದೆ. ಹೀಗೆ ಸರ್ವರೀತಿಯಲ್ಲೂ ವಿಫಲತೆಯನ್ನು ಕಾಣುತ್ತಿರುವ ಕಾಂಗ್ರೆಸ್ ಸರಕಾರವನ್ನು ಇಡೀ ದೇಶದಿಂದ ಕಿತ್ತೊಗೆಯುವ ಉದ್ದೇಶದಿಂದ ಹಾಗೂ ಮೋದಿಯವರನ್ನು ಮುಂದಿನ ಪ್ರಧಾನಿಯನ್ನಾಗಿಸುವ ಉದ್ದೇಶದಿಂದ `ಮನೆಮನೆಗೆ ಬಿಜೆಪಿ ನಡಿಗೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಕಾರ್ಯಕ್ರಮದ ಉದ್ದೇಶವನ್ನು ನಳಿನ್ ತಿಳಿಸಿದರು.
ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪಕ್ಷದ ನೇತೃತ್ವದಲ್ಲಿ ರಾಜೇಶ್ ನಾಯಕ್ ಉಳಿಪಾಡಿಗುತ್ತು ಇವರ ನೇತೃತ್ವದಲ್ಲಿ ಜ.14ರಿಂದ ಜ.26ರವರೆಗೆ ಒಟ್ಟು 13 ದಿನಗಳ ನಿರಂತರ ಪಾದಯಾತ್ರೆ ಹಾಗೂ ಗ್ರಾಮವಾಸ್ತವ್ಯ ಕಾರ್ಯಕ್ರಮ ನಡೆಯಲಿದೆ. ಇವರ ಜೊತೆಗೆ ಬಿಜೆಪಿ ಮುಖಂಡರಾದ ಎ. ರುಕ್ಮಯ ಪೂಜಾರಿ, ಬಿ ನಗರಾಜ ಶೆಟ್ಟಿ, ಕೆ.ಪದ್ಮನಾಭ ಕೊಟ್ಟಾರಿ, ಸುಲೋಚನ ಜಿ.ಕೆ. ಭಟ್, ಎಂ. ತುಂಗಪ್ಪ ಬಂಗೇರಾ, ಬಿ.ದೇವದಾಸ ಶೆಟ್ಟಿ ಮುಂತಾದ ನಾಯಕರು ಹೆಜ್ಜೆ ಹಾಕಲಿದ್ದಾರೆ.
ಪಾದಯಾತ್ರೆಯ ರಣರೀತಿ:
ಮುಖಂಡರು ಕ್ಷೇತ್ರದ ಬೇರೆ ಬೇರೆ ಕ್ಷೇತ್ರಗಳಲ್ಲಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಮುಖಂಡರ ಮನೆಮನೆಗೆ ಭೇಟಿಯ ಹಾಗೂ ಗ್ರಾಮವಾಸ್ತವ್ಯದ ಮುನ್ನ ಮೊದಲಾಗಿ ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿ ವಿಷಯ ತಿಳಿಸಲಿದ್ದಾರೆ. ನಂತರ ಬಿಜೆಪಿ ಮುಖಂಡರು ಮನೆಮನೆಗೆ ಭೇಟಿ ನೀಡಿ ಆಯ್ಕೆಯಾದ ಒಂದು ಮನೆಯಲ್ಲಿ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ.
ಗ್ರಾಮ ವಾಸ್ತವ್ಯ ಎಲ್ಲಿ ಎಲ್ಲಿ?
ಪೊಳಲಿಯಿಂದ ಕೊಳತ್ತಮಜಲಿಗೆ ಪಾದಯಾತ್ರೆ ಹೊರಟಿತು. ಅಲ್ಲಿಂದ ಬಡಕ್ಕಬೈಲಿಗೆ ತಲುಪಿದ ಪಾದಯಾತ್ರೆ ಕೊಳತ್ತಮಜಲಿನಲ್ಲಿ ನೆಲೆನಿಂತಿತು. ಕೊಳತ್ತಮಜಲಿನಲ್ಲಿ ಬೃಹತ್ ಕಾರ್ಯಕರ್ತರ ಸಮ್ಮುಖದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ನಂತರ 13 ದಿನಗಳ ಅವಧಿಯಲ್ಲಿ ಬೇರೆ ಬೇರೆ ಊರುಗಳಲ್ಲಿ ಪಾದಯಾತ್ರೆ ಗ್ರಾಮವಾಸ್ತವ್ಯ ನಡೆಯಲಿದೆ. ಕರಿಯಂಗಳ, ಅಮ್ಮುಂಜೆ, ತೆಂಕಬೆಳ್ಳೂರು, ಬಡಕಬೆಳ್ಳೂರು ಹೀಗೆ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಪಾದಯಾತ್ರೆ ನಡೆಯಲಿದೆ.
ಜ.15: ಸಜಿಪಮೂಡ ಮುನ್ನೂರು, ಜ.16: ಕನ್ಯಾನ, ಜ.17: ವೀರಕಂಭ, ಜ.18: ಕಲ್ಲಡ್ಕ, ಜ.19: ಮಾಣಿ,ಜ.20: ಪಾವೂರು, ಜ.21: ತೆಂಕಕಜೆಕಾರು, ಜ.22: ಇರ್ವತ್ತೂರು, ಜ.23: ವಗ್ಗ, ಜ.24: ಸಿದ್ದಕಟ್ಟೆ, ಜ.25: ಪಂಜಿಕಲ್ಲು, ಜ.26 ಕಳ್ಳಿಗೆ ಹೀಗೆ ಇಲ್ಲಿಂದ ಪಾದಯಾತ್ರೆ ನಡೆಯಲಿದೆ. ಜ.26: ಬಿ.ಸಿ.ರೋಡಲ್ಲಿ ಸಮಾರೋಪ ಸಭೆ ನಡೆಯಲಿದೆ.
ಪಾದಯಾತ್ರೆಯಲ್ಲಿ ಕಂಡುಬಂದ ಜನಸಾಗರ, ಕಾರ್ಯಕರ್ತರ ದಂಡು:
ಜ.14ರಂದು ಪಾದಯಾತ್ರೆ ಕಾರ್ಯಕ್ರಮಕ್ಕೆ ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು. ಇನ್ನೂ ಜನರು ಹೆಚ್ಚುವ ನಿರೀಕ್ಷೆ ಹುಟ್ಟಿಕೊಂಡಿದೆ. ಬಂಟ್ವಾಳ ವಿಧಾನಸಭೆ ಕಾಂಗ್ರೆಸ್ನ ಭದ್ರಕೋಟೆಯಾಗಿದ್ದು ಅದನ್ನು ಛಿದ್ರಗೊಳಿಸಲು ಬಿಜೆಪಿನಾಯಕರು ರಣನೀತಿ ರೂಪಿಸಿದ್ದಾರೆ.
ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ವಹಿಸಿದ್ದರು. ಪಾದಯಾತ್ರೆಯಲ್ಲಿ ಕ್ಯಾ. ಗಣೇಶ್ ಕಾಣರ್ಿಕ್, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕರಾದ ಯೋಗೀಶ್ ಭಟ್, ನಳಿನ್ ಕುಮಾರ್ ಕಟೀಲ್, ಜಗದೀಶ್ ಅಧಿಕಾರಿ, ರಾಮಚಂದ್ರ ಬೈಕಂಪಾಡಿ, ಡಾ. ಭರತ್ ಶೆಟ್ಟಿ, ವಿಕಾಸ್ ಪುತ್ತೂರು, ಪದ್ಮನಾಭ ಕೊಟ್ಟಾರಿ, ಬಿಜೆಪಿಯ ರಾಜ್ಯ ಉಪಾಧ್ಯಕ್ಷೆ ಸುಲೋಚನ ಜಿ.ಕೆ ಭಟ್., ಎಸ್ ತುಂಗಪ್ಪ ಬಂಗೇರಾ, ಬಿ. ದೇವದಾಸ ಶೆಟ್ಟಿ, ಜಿ. ಆನಂದ, ದೇವಪ್ಪ ಪೂಜಾರಿ, ರಾಮದಾಸ ಬಂಟ್ವಾಳ್, ಉಪಸ್ಥಿತರಿದ್ದರು.











