ಸುದ್ದಿ9 ಕೈಕಂಬ ;ಬಜ್ಪೆ ಠಾಣಾ ವ್ಯಾಪ್ತಿಯ ಗುರುಪುರ ಕೈಕಂಬ ಸಮೀಪದ ಕಾಜಿಲ ಎಂಬಲ್ಲಿ ಕೂಲಿಕಾಮರ್ಿಕರನ್ನು ಹೊತ್ತುಕೊಂಡು ಹೋಗುತ್ತಿದ್ದ ರಿಕ್ಷಾವೊಂದು ಶುಕ್ರವಾರ ಸಂಜೆ ಕಮರಿಗೆ ಬಿದ್ದ ಘಟನೆ ನಡೆದಿದೆ. ಕೈಕಂಬದ ಕಡೆಯಲ್ಲಿ ಕೆಲಸ ಮುಗಿಸಿ ಮನೆಗೆ ತೆರಳಲು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಕಾಮರ್ಿಕರು ಕಾಜಿಲ ಎಂಬಲ್ಲಿ ಸುಮಾರು 200 ಅಡಿ ಆಳದ ಕಮರಿಗೆ ಬಿದ್ದು ರಿಕ್ಷದಲ್ಲಿ ಇದ್ದ ಸಹಿತ ಆರು ಮಂದಿ ಗಾಯಗೊಂಡ ಘಟನೆ ನಡೆದಿದೆ.

ಇವರು ಕೆಲಸ ಮುಗಿಸಿ ಅಡ್ಡೂರು ಕಡೆ ತೆರಳುವಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಬಾವಿಯ ರಿಂಗ್ ತಯಾರಿಸುವ ಸುಮಾರು ಆರು ಮಂದಿ ಕಾಮರ್ಿಕರು ಇದರಲ್ಲಿ ಇದ್ದರು ಎನ್ನಲಾಗಿದ್ದು ಒಬ್ಬ ಮಹಿಳೆ ಗಂಭೀರ ಗಾಯಗೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸತಾಗಿ ಖರೀದಿಸಿದ ರಿಕ್ಷಾ ಇದಾಗಿದ್ದು ಅಡ್ಡೂರಿನ ವ್ಯಕ್ತಿಯೋರ್ವರಿಗೆ ಸೇರಿದ್ದೆನ್ನಲಾಗಿದೆ. ರಿಕ್ಷಾ ಉರುಳಿದ ರಭಸಕ್ಕೆಪ್ರಯಾಣಿಕರು ಪವಾಡಸದೃಶ್ಯ ಪಾರಾಗಿದ್ದಾರೆ. ಬಜ್ಪೆ ಪೊಲೀಸರು ಸ್ಥಳಕ್ಕೆ ದೌಢಾಯಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.



