ಮೂಡುಬಿದರೆ: ಡಾ.ಎಂ.ಶೆಟ್ಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾ.19ರಿಂದ ಸ್ಪ್ಲಾಶ್-2015 ಸಾಂಸ್ಕೃತಿಕ ಮತ್ತು ತಾಂತ್ರಿಕ ಉತ್ಸವ ನಡೆಯಲಿದೆ.
ಮಾರ್ಚ್ 19 ರಂದು ಬೆಳಿಗ್ಗೆ 9.00 ಗಂಟೆಗೆ ಗಜೇಂದ್ರಗಢ ಸರ್ಕಾರಿ ಪಾಲಿಟಿಕ್ನಿಕ್ ಕಾಲೇಜಿನ ಪ್ರಾಂಶುಪಾಲ ಎಸ್.ಟಿ. ಭೈರಪ್ಪನವರು ಉದ್ಘಾಟಿಸಲಿದ್ದಾರೆ . ಎಸ್.ಎನ್. ಪಾಲಿಟೆಕ್ನಿಕ್ ಪ್ರಾಂಶುಪಾಲ ಜೆ.ಜೆ.ಪಿಂಟೋ ಅತಿಥಿಯಾಗಿ ಆಗಮಿಸುವರು .

2 ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಸಂಗೀತನೃತ್ಯ, ರೋಬೊವಾರ್, ರಂಗೋಲಿ, ಕ್ವಿಜ್, ಮೆಹಂದಿ, ಪೈಂಟಿಂಗ್, ಕೋಡಿಂಗ್, ಗೇಮಿಂಗ್, ಕೋಲಾಜ್, ದಮ್ಶರಾದ್, ಕುಕ್ಕಿಂಗ್,ಸೆಕ್ಯೂರೆಟ್ ಬ್ರೆಕರ್, ಟ್ರಿಷೆರ್ಹಂಟ್, ಫ್ಯಾಶನ್ ಶೋ, ಪೇಪರ್ ಪ್ರೆಸೆಂಟೇಶನ್, ಫೋಟೋಗ್ರಾಫಿ ಮುಂತಾದ 18 ಸ್ಪರ್ಧೆಗಳು ನಡೆಯಲಿದೆ. ಬೈಕ್ ಸಾಹಸ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳ ಪ್ರಾಜೆಕ್ಟ್ ಪ್ರದರ್ಶನ ಕೂಡಾ ಆಯೋಜಿಸಲಾಗಿದೆ. ಮಾರ್ಚ್ 20 ರಂದು ಸಂಜೆ 5.00 ಗಂಟೆಗೆ ನಡೆಯುವ ಸಮಾರೋಪ ಸಮಾರಂಭ ನಡೆಯಲಿದೆ.
ಪ್ರತಿಭಾ ದಿನಾಚರಣೆ, ಪದವಿ ಪ್ರದಾನ:
ಮಾ.18ರಂದು ಕಾಲೇಜಿನ ವಿದ್ಯಾರ್ಥಿಗಳಿಂದ `ಸಂಭ್ರಮ’ ಪ್ರತಿಭಾ ದಿನಾಚರಣೆ ನಡೆಯಲಿದೆ. ಕಾಲೇಜಿನ ವಾರ್ಷಿಕ ಸಮಾರಂಭ ಹಾಗೂ 4ನೇ ಬ್ಯಾಚಿನ ಪದವಿ ಪ್ರಧಾನ ಸಮಾರಂಭ 21ರಂದು ನಡೆಯಲಿದೆ. ಸುರತ್ಕಲ್ ಎನ್.ಐ.ಟಿ.ಕೆ.ಯ ಡೀನ್ ಡಾ. ಎ. ಕಂದ ಸಾಮಿ, ನೋವಿಗೊ ಸೊಲುಶನ್ ಫ್ರೈ.ಲಿ ಕಂಪೆನಿಯ ಎಂ.ಡಿ.ಪ್ರವೀಣ್ ಕಲ್ಬಾವಿ ಭಾಗವಹಿಸಲಿದ್ದಾರೆ. ಡಾ.ಎಂ.ವಿ.ಶೆಟ್ಟಿ ಮೆಮೋರಿಯಲ್ ಟ್ರಸ್ಟ್ನ ಕಾರ್ಯದರ್ಶಿ ಡಾ. ರಾಮ್ ಗೋಪಾಲ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
