ಮೂಡಬಿದರೆ: ಮಿಜಾರು ದಡ್ಡಿ ಶ್ರೀ ಆದಿಶಕ್ತಿ ಮಹಮ್ಮಾಯಿ ದುರ್ಗಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರ ಮಹೋತ್ಸವದ ಸಲುವಾಗಿ ವರ್ಷಾವಧಿ ಮಾರಿಕಾಂಬಾ ಉತ್ಸವ ಮತ್ತು ವಾರಾಹಿ ದೈವದ ಬಲಿಸೇವೆ ಜರಗಲಿರುವುದು.  ಮಾ.17  ಬೆಳ್ಳಿಗೆ ಗಂಟೆ 9 ರಿಂದ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ,ಗಣಹೋಮ, ನವಕ ಪ್ರಧಾನ ಕಲಶ, ಬೆಳ್ಳಿಗೆ ಗಂಟೆ 10 ರಿಂದ ನಾಗತಂಬಿಲ, 10-30ಕ್ಕೆ ಅಶ್ವತ್ಥಕಟ್ಟೆಯಲ್ಲಿ ದುರ್ಗಾದೇವಿಯ ಪ್ರತಿಬಿಂಬ ಪ್ರತಿಷ್ಠೆ, ಮಧ್ಯಾಹ್ನ 12ಕ್ಕೆ ಮಾಹಾಪೂಜೆ, ದರ್ಶನ, ಮಡೆಸ್ನಾನ ಬಲಿ, ಕಾಣೆಕೆ ಹರಕೆಸೇವೆ ಇತ್ಯಾದಿ ಮಧ್ಯಾಹ್ನ 1 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 6.30ಕ್ಕೆ ವಾರಹಿ ದೈವದ ಭಂಡಾರ ಬರುವುದು,ರಾತ್ರಿ 7ಕ್ಕೆ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಹವ್ಯಾಸಿ ಕಲಾವೃಂದ ಮಿಜಾರು ದಡ್ಡಿ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ತುಳು ಸಾಮಜಿಕ ಹಾಸ್ಯಮಯ ನಾಟಕ, ರಾತ್ರಿ 10ಕ್ಕೆ ಅಶ್ವತ್ಥಕಟ್ಟೆಯಿಂದ ಶ್ರೀ ದುರ್ಗಾದೇವಿಯ ಪ್ರತಿಬಿಂಬ ಮೆರವಣಿಗೆ ಮತ್ತು ದೇವಸ್ಥಾನದಲ್ಲಿ ಪ್ರತಿಷ್ಠೆ,ರಾತ್ರಿ 11.30ಕ್ಕೆ ವಾರಹಿ ದೈವದ ಬಲಿಸೇವೆ, ರಾತ್ರಿ 2ಕ್ಕೆ ಮಾಹಾಪೂಜೆ, ದರ್ಶನಕಾಣಿಕೆ ಇತ್ಯಾದಿ.    ಮಾ.18 ಬುಧವಾರ ಮಧ್ಯಾಹ್ನ 2ರಿಂದ ಮಾಹಾಪೂಜೆ, ದರ್ಶನಕಾಣಿಕೆ ಇತ್ಯಾದಿ. ಮಾ.19 ಮಧ್ಯಾಹ್ನ 12 ರಿಂದ ಗ್ರಾಮಾರಿಷ್ಟ ನಿವಾರಣಾ ಬಗ್ಗೆ “ಸಿಹಿಯಾಳಾಭಿಷೇಕ” ನವಕ ಪ್ರಧಾನ ಕಲಶ, ಪ್ರಸಾದ ವಿತರಣೆ, ಮಾ.21 ಶನಿವಾರ ಸಂಜೆ 6ರಿಂದ ಸಾರ್ವಜನಿಕ ಶ್ರೀ ಸತ್ಯನಾರಯಣ ಪೂಜೆ ನಡೆಯಲಿರುವುದು.

By suddi9

Leave a Reply

Your email address will not be published. Required fields are marked *