ಗಿನ್ನೆಸ್ ದಾಖಲೆ ಸೇರಲು ಸಜ್ಜಾಗಿದೆ ಇರ್ವಿನ್‍ರ ಮಸಣದ ಮನೆ
ಮಂಗಳೂರು: ಬಾಲ್ಯದಿಂದಲೇ ಸೊಳ್ಳೆಗಳ ಜೊತೆ ವೈರತ್ವ ಕಟ್ಟಿಕೊಂಡಿದ್ದ ಮಂಗಳೂರಿನ ವ್ಯಕ್ತಿಯೊಬ್ಬರು ಇದೀಗ ಹತ್ತು ಕೋಟಿ ಸೊಳ್ಳೆಗಳ ಮಾರಣ ಹೋಮ ನಡೆಸೋ ಮೂಲಕ ಸುದ್ದಿ ಮಾಡಿದ್ದಾರೆ. ಮೂರೇ ತಿಂಗಳಲ್ಲಿ ಬರೋಬ್ಬರಿ ಹತ್ತು ಕೋಟಿಗೂ ಹೆಚ್ಚು ಸೊಳ್ಳೆಗಳ ಕೊಂದು ಶೇಖರಿಸಿಟ್ಟಿರೋ ಈ ವ್ಯಕ್ತಿ ಗಿನ್ನೆಸ್ ದಾಖಲೆಗೆ ಸಿದ್ದತೆ ನಡೆಸಿದ್ದಾರೆ.
vlcsnap-2015-03-11-18h42m01s166

vlcsnap-2015-03-11-18h42m40s48

vlcsnap-2015-03-11-18h42m56s199

vlcsnap-2015-03-11-18h43m07s56

vlcsnap-2015-03-11-18h43m29s20

vlcsnap-2015-03-11-18h43m40s132
ಮಂಗಳೂರಿನ ಮಣ್ಣುಗುಡ್ಡೆ ನಿವಾಸಿಯಾಗಿರೋ ಇಗ್ನೇಶಿಯಸ್ ಇರ್ವಿನ್ ಡಿಸೋಜಾ ಎಂಬವರೇ ಈ ಅಪರೂಪದ ಸಾಧನೆ ಮಾಡಿರೋ ಮಂಗಳೂರಿಗ. ಎಳವೆಯಿಂದಲೇ ಸೊಳ್ಳೆಗಳನ್ನ ಕಂಡ್ರೆ ಶತ್ರುಗಳೆಂದೇ ಭಾವಿಸೋ ಇವರು ಇದುವರೆಗೂ ಕೊಂದಿರೋ ಸೊಳ್ಳೆಗಳಿಗೆ ಲೆಕ್ಕವೇ ಇಲ್ಲ. ಎಲ್ಲಾದ್ರೂ ಸೊಳ್ಳೆಗಳನ್ನ ಕಂಡ್ರೆ ಸಾಕು ಹುಡುಕಿ ಹುಡುಕಿ ಕೊಂದು ಹಾಕ್ತಾರೆ. ಮಾತ್ರವಲ್ಲ ಕಳೆದ ಮೂರೇ ಮೂರು ತಿಂಗಳಲ್ಲಿ ಬರೋಬ್ಬರಿ 10 ಕೋಟಿಗೂ ಅಧಿಕ ಸೊಳ್ಳೆಗಳನ್ನ ಕೊಂದು ಅವುಗಳ ಕಳೆಬರಹಗಳನ್ನ ಶೇಖರಿಸಿಟ್ಟಿದ್ದಾರೆ. ಇದೀಗ ಗಿನ್ನೆಸ್ ಬುಕ್ ಆಫ್ ರೆಕಾರ್ಡ್‍ನಲ್ಲಿ ತನ್ನ ಹೆಸರನ್ನ ಅಚ್ಚೋದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನ ಮಾಡಿಕೊಂಡಿದ್ದಾರೆ. ಬಿಕಾಂ ಪಧವೀದರರಾಗಿರೋ ಇವ್ರು ಸದ್ಯ ಗ್ರಾನೈಟ್ ಬ್ಯುಸಿನೆಸ್ ಮಾಡಿಕೊಂಡಿದ್ದಾರೆ. ಇನ್ನು ಇದುವರೆಗೂ ಯಾರೂ ಕೂಡ ಸೊಳ್ಳೆಗಳನ್ನ ಕೊಂದು ಸಂಗ್ರಹಿಸಿಡೋ ಕಾರ್ಯಕ್ಕೆ ಮುಂದಾಗಿಲ್ಲ. ಹೀಗಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಗಳಿಗೂ ದಾಖಲೆಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಸೊಳ್ಳೆ ಕೊಲ್ಲೋದಕ್ಕೆ ಮಾಝಿಕ್ವಿಟ್ ಯಂತ್ರ:
ಇನ್ನು ಇವ್ರ ಸೊಳ್ಳೆ ಹತ್ಯೆಗೆ ಬಳಕೆಯಾಗಿರೋದು ಇವ್ರ ಕೈಯಿಂದಲೇ ರೂಪ ಪಡೆದುಕೊಂಡಿರೋ ಸೊಳ್ಳೆ ಕಿಲ್ಲರ್ ಯಂತ್ರ. ಮೊದಮೊದಲು ಮಾರುಕಟ್ಟೆಯಲ್ಲಿ ಸಿಗ್ತಾ ಇದ್ದ ಯಂತ್ರದಿಂದಲೇ ಸೊಳ್ಳೆಗಳನ್ನ ಕೊಳ್ತಾ ಇದ್ದರಾದ್ರೂ ಅದು ಅಷ್ಟಾಗಿ ಯಶಸ್ಸು ಕಾಣಲಿಲ್ಲ. ಹೀಗಾಗಿ 15 ವರ್ಷಗಳ ನಿರಂತರ ಶ್ರಮದ ಮೂಲಕ ನರೋನ್ಹಾ ಪರಿಸರ ಸ್ನೇಹಿಯಾಗಿರೋ ಸೊಳ್ಳೆ ಕೊಲ್ಲುವ ಯಂತ್ರವೊಂದನ್ನ ಸಂಶೋಧನೆ ಮಾಡಿದ್ದಾರೆ. ನರೋನ್ಹಾ ಸಂಶೋಧಿಸಿರೋ ಯಂತ್ರಕ್ಕೆ ಮಾಝಿಕ್ವಿಟ್ ಅನ್ನೋ ಹೆಸರನ್ನಿಟ್ಟಿದ್ದಾರೆ. ಈ ಯಂತ್ರಕ್ಕೆ ವಿದ್ಯುತ್ ಸಂಪರ್ಕ ನೀಡುತ್ತಿದ್ದಂತೆಯೇ ಯಂತ್ರ ಕಾರ್ಯ ನಿರ್ವಹಿಸೋದಕ್ಕೆ ಶುರು ಮಾಡುತ್ತೆ. ಈ ಯಂತ್ರದಲ್ಲಿ ಅಳವಡಿಸಿರೋ ಪೌಡರ್ ಸೊಳ್ಳೆಗಳನ್ನ ತನ್ನತ್ತ ಸೆಳೆಯೋ ಕಾರ್ಯವನ್ನು ಮಾಡಿದ್ರೆ, ಯಂತ್ರದೊಳಗೆ ಅಳವಡಿಸಿರೋ ಫ್ಯಾನ್ ಸೊಳ್ಳೆಗಳನ್ನು ಕೊಲ್ಲುವ ಕಾರ್ಯವನ್ನು ಮಾಡುತ್ತಿದೆ. ಈ ಯಂತ್ರವನ್ನ ಬಳಸಿ ಮನೆಯಲ್ಲಿ ಸಾವಿರಾರು ಸೊಳ್ಳೆಗಳಿದ್ದರೂ ಕೂಡ ಅವುಗಳನ್ನು ಕೊಲ್ಲಬಹುದಾಗಿದೆ.
ನರೋನ್ಹಾ ಆವಿಷ್ಕಾರ ಮಾಡಿರೋ ಯಂತ್ರವೊಂದಕ್ಕೆ ಈಗಾಗಲೇ ಸಾವಿರದ ಐದನೂರು ರೂಪಾಯಿ ವೆಚ್ಚ ತಗಲುತ್ತಿದ್ದು, ಅದೇ ಬೆಲೆಯಲ್ಲಿ ಎಲ್ಲರಿಗೂ ಮಾರಾಟ ಮಾಡುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *