ಮೂಡುಬಿದರೆ: 5 ಲಕ್ಷ ರೂಪಾಯಿ ಚೆಕ್ ಅಮಾನ್ಯ ಪ್ರಕರಣದಲ್ಲಿ ಮೂಡುಬಿದರೆ ಕೋರ್ಟ್ ನಿಂದ ಶಿಕ್ಷೆಗೊಳಗಾಗಿದ್ದ ಗಾಂಧಿನಗರದ ನಿವಾಸಿ ಉಪಾ ಕಿರಣ್ ಅವರ ವಿರುದ್ಧ ಕೋರ್ಟ್  ಬಂಧನ ವಾರಂಟ್ ಹೊರಡಿಸಿದೆ.
download (1)
ಉಷಾ ಕಿರಣ್ ಅವರು ಪೇಪರ್ಮಿಲ್ನ ಸುಂದರ ಪೂಜಾರಿಯವರಿಗೆ ನೀಡಿದ್ದ ಸಾಲ ಮರುಪಾವತಿಯ 5 ಲಕ್ಷ ರೂಪಾಯಿ ಮೊತ್ತದ ಚೆಕ್ ಬ್ಯಾಂಕ್ನಲ್ಲಿ ಬೌನ್ಸ್ ಆದ ಪ್ರಕರಣಕ್ಕೆ ಸಂಬಂಧಿಸಿ ಅರ್ಜಿದಾರರ ಪರವಾಗಿ ವಕೀಲ ಶರತ್ ಶೆಟ್ಟಿ ಮತ್ತು ಮ್ಯಾಥ್ಯೂ ಮಸ್ಕರೇನಸ್ 2004ರಲ್ಲಿ ಮೂಡುಬಿದಿರೆ ಕೋಟರ್್ನಲ್ಲಿ ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ತಪ್ಪಿತಸ್ಥ ಎಂದು ಘೋಷಿಸಿ 9.90 ಲಕ್ಷ ರೂಪಾಯಿ ಪರಿಹಾರವನ್ನು ಅರ್ಜಿದಾರರಿಗೆ ಮತ್ತು ರೂ 10 ಸಾವಿರ ದಂಡದ ರೂಪದಲ್ಲಿ ಕೋರ್ಟ್ಗೆ ಕಟ್ಟುವಂತೆ ಆದೇಶಿಸಿತ್ತು.
ಇದರ ವಿರುದ್ಧ ಉಷಾ ಕಿರಣ್ ಜಿಲ್ಲಾ ಸೆಶನ್ಸ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರೂ ಪ್ರಕರಣದ ಮರುವಿಚಾರಣೆಗೆ ಮೂಡುಬಿದರೆ ಕೋರ್ಟ್ ಗೆ ವಾಪಾಸು ಕಳಿಹಿಸಲಾಗಿತ್ತು. ಮೂಡುಬಿದರೆ ಕೋರ್ಟ್ ತನ್ನ ಹಿಂದಿನ ಆದೇಶವನ್ನೆ ಎತ್ತಿಹಿಡಿಯಿತು. ಆರೋಪಿ ಕೋರ್ಟ್ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಅವರ ವಿರುದ್ಧ ಬಂಧನ ವಾರಂಟ್ ಜಾರಿಯಾಗಿದ್ದು ಮಾರ್ಚ್ 24ರೊಳಗೆ ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸುವಂತೆ ಆದೇಶಿಸಿದೆ. ಪೊಲೀಸರು ಆರೋಪಿಯ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆಂದು ತಿಳಿದುಬಂದಿದೆ.

By Suddi9

Leave a Reply

Your email address will not be published. Required fields are marked *