ಬಂಟ್ವಾಳ: ತೀರಾ ಹದಗೆಟ್ಟಿರುವ ಪುಂಜಾಲಕಟ್ಟೆ -ಬೆರ್ಕಳ ರಸ್ತೆಯನ್ನು ಶೀಘ್ರ ದುರಸ್ತಿಪಡಿಸುವಂತೆ ಒತ್ತಾಯಿಸಿ ತುಳುನಾಡ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಶನಿವಾರ ಪುಂಜಾಲಕಟ್ಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಅವರು ಜನಸಾಮಾನ್ಯರ ಭಾವನೆಗಳನ್ನು ಅರಿತುಕೊಳ್ಳದೆ ಅಭಿವೃದ್ಧಿಯ ಹೆಸರಿನಲ್ಲಿ ವ್ಯರ್ಥ ರಾಜಕಾರಣ ಮಾಡುತ್ತಿರುವ ಜನಪ್ರತಿನಿಗಳು ಜನರ ಸಂಕಷ್ಟಕ್ಕೆ ಕಾರಣರಾಗುತ್ತಿದ್ದಾರೆ. ಮುಂದಿನ 15 ದಿನಗಳೊಳಗಾಗಿ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು. ಜನಪ್ರತಿನಿಗಳು ಮತ್ತು ಅಕಾರಿಗಳು ನೀಡುವ ಅಭಿವೃದ್ಧಿ ಹೇಳಿಕೆಗಳು ಭರವಸೆಗಳಾಗಿಯೇ ಉಳಿದಿವೆ. ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡಿ ಹೋರಾಟಕ್ಕೆ ಅವಕಾಶ ನೀಡಬೇಡಿ. ಕಾಮಗಾರಿ ಆರಂಭವಾಗದಿದ್ದಲ್ಲಿ ಪುಂಜಾಲಕಟ್ಟೆಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

pkt1
ತುಳುನಾಡ ರಕ್ಷಣಾವೇದಿಕೆ ವಕ್ತಾರ ಎಂ.ಜಿ.ಹೆಗಡೆ ಅವರು ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಮೂಲ ಸೌಕರ್ಯಗಳನ್ನು ಬಯಸುವುದು ಪ್ರಜೆಗಳ ಹಕ್ಕು . ಪ್ರತಿಭಟನೆಯನ್ನು ಹತ್ತಿಕ್ಕುವ ಅಕಾರ ಯಾರಿಗೂ ಇಲ್ಲ . ಹೆದ್ದಾರಿ ಐದು ನಿಮಿಷಗಳ ಕಾಲ ತಡೆಯಾದರೆ ಆತಂಕಗೊಳ್ಳುವ ಅಕಾರಿಗಳು ನಿತ್ಯಸಂಚಾರದ ರಸ್ತೆಯಲ್ಲಿ ಬಸ್ ಸಂಚಾರವಿಲ್ಲದಿದ್ದರೆ ಯಾಕೆ ಸ್ಪಂದಿಸುವುದಿಲ್ಲ . ರಸ್ತೆ ದುರಸ್ತಿ ಯಾರು ನಡೆಸಬೇಕೆನ್ನುವ ಜಿಜ್ಞಾಸೆ ಬಿಟ್ಟು ಶೀಘ್ರ ರಸ್ತೆ ಸರಿಪಡಿಸುವುದು ಜನಪ್ರತಿನಿಗಳ ಕರ್ತವ್ಯ ಎಂದ ಅವರು ಮುಂದಿನ 15 ದಿನಗಳಲ್ಲಿ ಕಾಮಗಾರಿ ಆರಂಭಿಸದಿದ್ದಲ್ಲಿ ರಸ್ತೆ ಅಗೆದು ಹಾಕಲಾಗುವುದು. ಸಾರ್ವಜನಿಕ ಹಿತಾಸಕ್ತಿಯಿಂದ ಬಂಧನಕ್ಕೊಳಗಾಗಲು ಸಿದ್ಧ ಎಂದು ಹೇಳಿದರು. ಕಜೆಕಾರು ಸಿ.ಎ.ಬ್ಯಾಂಕ್ ಅಧ್ಯಕ್ಷ ಕೆ.ಹರೀಶ್ಚಂದ್ರ ಪೂಜಾರಿ, ಉಚ್ಚಿಲ ತು.ರ.ವೇ.ಘಟಕ, ಕೋಟಿ ಚೆನ್ನಯ ಪ್ರತಿಷ್ಠಾನದ ಅಧ್ಯಕ್ಷ ಜೀವನ್ ವಿಜಯಾನಂದ ಗುರೂಜಿ, ತು.ರ.ವೇ.ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿಕಾ ಜೈನ್, ಉದ್ಯಮಿ ಪದ್ಮಮೂಲ್ಯ ಅನಿಲಡೆ, ಅಂಬೆಡ್ಕರ್ ಪ್ರತಿಷ್ಠಾನದ ಜಿಲ್ಲಾಧ್ಯಕ್ಷ ಎ.ಕೆ.ಸಾಲು ಅವರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ತು.ರ.ವೇ.ವಕೀಲರ ಘಟಕದ ರಾಜ್ಯಾಧ್ಯಕ್ಷ ರಾಘವೇಂದ್ರ ರಾವ್, ತು.ರ.ವೇ. ಪ್ರ.ಕಾರ್ಯದಶರ್ಿ ಹಸನ್ ಮಾಡೂರು, ಉಪಾಧ್ಯಕ್ಷರಾದ ರಾಮ ಎಸ್. ಬಂಗೇರ, ವಿಜಯ ನಾಯರ್, ಪ್ರಕಾಶ್ ಪಿ.ಬಿ., ಅಬ್ದುಲ್ ಸಲಾಮ್, ವಾಮದಪದವು ಘಟಕ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ , ಕೋಟೆಕಾರ್ ಘಟಕ ಅಧ್ಯಕ್ಷ ರವಿಶೆಟ್ಟಿ ಮಾಡೂರು, ನಗರ ಘಟಕಾಧ್ಯಕ್ಷ ಆನಂದ ಅಡ್ಯಾರ್, ಮಾನವ ಹಕ್ಕು ಮತ್ತು ಭ್ರಷ್ಠಾಚಾರ ನಿಮರ್ೂಲನಾ ಸಮಿತಿ ಅಧ್ಯಕ್ಷ ಗೀತಾನಂದ ಶೆಟ್ಟಿ , ಜೊತೆ ಕಾರ್ಯದಶರ್ಿ ಸುಖಲತಾ ಶೆಟ್ಟಿ , ಜಿ.ಪಂ. ಮಾಜಿ ಉಪಾಧ್ಯಕ್ಷ ಎಂ. ತುಂಗಪ್ಪ ಬಂಗೇರ, ಜನಜಾಗೃತಿ ವೇದಿಕೆ ಮಡಂತ್ಯಾರು ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಕಜೆಕಾರು ಗೀತಾ ಭಜನ ಮಂಡಳಿ ಅಧ್ಯಕ್ಷೆ ಶೋಭಾ ಮಾಲತಿ, ಪುಂಜಾಲಕಟ್ಟೆ ಘಟಕದ ಪದಾಕಾರಿಗಳಾದ ಜೇಮ್ಸ್ಸುನಿಲ್ ಅಂಚನ್, ಹರೀಶ್ ಶೆಟ್ಟಿ ವಾಮದಪದವು, ಕೃಷ್ಣಪ್ಪ ಪೂಜಾರಿ ಕಜೆಕಾರು, ಪ್ರಶಾಂತ್, ಪ್ರವೀಣ್ ಶೆಟ್ಟಿ , ಅಟೋರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಸತೀಶ್, ಕಾರ್ಯದಶರ್ಿ ನರೇಶ್, ಯಶೋಧರ ಶೆಟ್ಟಿ , ಗೂಡ್ಸ್ಟೆಂಪೋ ವಾಹನ ಚಾಲಕ ಮಾಲಕ ಸಂಘದ ಅಧ್ಯಕ್ಷ ರಾಜು ಶೆಟ್ಟಿ , ರಾಧಾಕೃಷ್ಣ , ಮಂಜಲಪಲ್ಕೆ ಜುಮ್ಮಾ ಮಸೀದಿಯ ಮಾಜಿ ಧರ್ಮಗುರು ಅಬ್ದುಲ್ ಹಾಜಿಸಲಾಮ್,ಎಸ್.ಡಿ.ಪಿ.ಐ. ಸಂಚಾಲಕ ಅಶಾಕ್ ಮತ್ತಿತರರು ಭಾಗವಹಿಸಿದ್ದರು.
ಪುಂಜಾಲಕಟ್ಟೆ ಘಟಕ ಅಧ್ಯಕ್ಷ ರಮೇಶ್ ಶೆಟ್ಟಿ ಮಜಲೋಡಿ ಅವರು ಸ್ವಾಗತಿಸಿದರು. ಪ್ರಕಾಶ ಪ್ರಭು ಗುಂಡಿದಡ್ಡ ಕಾರ್ಯಕ್ರಮ ನಿರೂಪಿಸಿದರು.

ಸಮಸ್ಯೆ ಜಿಲ್ಲಾಕಾರಿ ಬಳಿಗೆ: ರಸ್ತೆಗೆ ಈಗಾಗಲೇ ಅನುದಾನ ಮಂಜೂರುಗೊಂಡಿದ್ದರೆ ಅದೇ ಅನುದಾನದಿಂದ ಕಾಮಗಾರಿ ನಡೆಯಲಿ. ಯಾವುದೇ ಕಾರಣಕ್ಕೆ ಅನುದಾನವನ್ನು ವಗರ್ಾಯಿಸಲು ಅವಕಾಶ ಕೊಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಈ ವೇಳೆ ಜಿ.ಪಂ.ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯನಿವರ್ಾಹಕ ಅಭಿಯಂತರ ನರೇಂದ್ರ ಅವರು ಸ್ಥಳಕ್ಕಾಗಮಿಸಿ ರಸ್ತೆ ದುರಸ್ತಿಯನ್ನು ಪ್ರಧಾನಮಂತ್ರಿ ಗ್ರಾಮಸಡಕ್ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಗೆ ಹಸ್ತಾಂತರಿಸಲಾಗುವುದು ಎಂದು ಹೇಳಿದರು. ಇದಕ್ಕೊಪ್ಪದ ಪ್ರತಿಭಟನಾಕಾರರು ಈ ಬಗ್ಗೆ ಜಿಲ್ಲಾಕಾರಿಯವರಿಂದ ಸ್ಪಷ್ಟನೆ ಕೊಡಿಸಬೇಕು ಎಂದು ಪಟ್ಟು ಹಿಡಿದರು. ಕೊನೆಗೆ ಸೋಮವಾರ ಜಿಲ್ಲಾಕಾರಿ ಸಮ್ಮುಖದಲ್ಲಿ ಅಕಾರಿಗಳು ರಸ್ತೆ ದುರಸ್ತಿ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಯೋಗೀಶ ಶೆಟ್ಟಿ ಅವರು ನೀಡಿದ ಸಲಹೆಗೆ ಅಕಾರಿಗಳ ಒಪ್ಪಿಗೆ ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.

By suddi9

Leave a Reply

Your email address will not be published. Required fields are marked *