ಮಂಗಳೂರು: ಮೆಲ್ಕಾರ್‍ನ ಪ್ರತಿಷ್ಠಿತ ಹೊಟೇಲ್‍ವೊಂದರಲ್ಲಿ ಇಬ್ಬರು ವಿದ್ಯಾರ್ಥಿನಿಯರ ಜೊತೆ ಯುವಕನೊಬ್ಬ  ಚಕ್ಕಾಂದ ಆಡುತ್ತಿದ್ದಾನೆ ಎನ್ನುವ ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ದಿಢೀರ್ ದಾಳಿ ನಡೆಸಿದ ಘಟನೆ ನಿನ್ನೆ ನಡೆದಿದ್ದು ಮೂವರು ಆರೋಪಿಗಳನ್ನು  ಪೊಲೀಸರು ವಶಪಡಿಸಿಕೊಂಡಿದ್ದಾರೆ.
1... ಯುವಕನನ್ನು ಗುರುಪುರ, ಕೈಕಂಬ ಯಾಸೀನ್ ಎಂದು ಗುರುತಿಸಲಾಗಿದ್ದು,  ಇಬ್ಬರು ಯುವತಿಯರನ್ನು ಬಂಟ್ವಾಳ ಸರಕಾರಿ ಕಾಲೇಜಿನ ವಿದ್ಯಾರ್ಥಿನಿಯರೆಂದು ಗುರುತಿಸಲಾಗಿದೆ. ಈ ಪೈಕಿ ಒಬ್ಬಾಕೆ ಉಜಿರೆಯವಳಾದಳೆ, ಮತ್ತೊಬ್ಬಳು ಹಾಸನ ಮೂಲದವಳೆಂದು ಗುರುತಿಸಲಾಗಿದೆ.
ಹಾಸ್ಟೆಲ್ ವಿದ್ಯಾರ್ಥಿನಿಯಾರದ ಇವರಿಬ್ಬರು ಕಾಲೇಜ್ ಸಮೀಪದ ಹೋಟೆಲ್‍ಗೆ ಬಂದಿದ್ದರು. ಈ ವೇಳೆ ಇವರ ಜೊತೆ ಯುವಕನೊಬ್ಬ ಸಿಕ್ಕಿದ ಎನ್ನಲಾಗಿದ್ದು   ಹೋಟೆಲ್‍ನಲ್ಲಿ ರೂಂ ಮಾಡಲು ಮುಂದಾಗಿದ್ದರು ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಸಂಘಟನೆಗೆ ಸೇರಿದ ಯುವಕರು ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದು ಪೊಲೀಸರು ಹೋಟೆಲ್ ರೂಮಿಗೆ ರೈಡ್ ನಡೆಸಿದರು ಎಂದು ತಿಳಿದುಬಂದಿದೆ.

By suddi9

Leave a Reply

Your email address will not be published. Required fields are marked *