sumggle2

sumggle1ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 24 ಲಕ್ಷ ರೂ, ಮೌಲ್ಯದ 800 ಗ್ರಾಂ ಚಿನ್ನವನ್ನು ವಶಪಡಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಕಾಸರಗೋಡಿನ ಮೇಲಂಗಡಿ ನಿವಾಸಿ ಅಬ್ದುಲ್ ಗಫೂರ್ ಎಂಬಾತ ದುಬೈಯಿಂದ ನಿನ್ನೆ 7.30ರ ಸುಮಾರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ. ಆತ ಲಕ್ಸ್ ಸಾಬೂನು ಮತ್ತು ಅಮೆರಿಕನ್ ಗಾರ್ಡನ್ ಹೆಸರಿನ ಚಾಕಲೇಟ್ ಬಾಟಲಿಯಲ್ಲ್ಲಿ ಚಿನ್ನ ಕಳ್ಳ ಸಾಗಾಟ ಮಾಡಲು ಯತ್ನಿಸಿದ್ದ. ಇದನ್ನು ಪತ್ತೆಹಚ್ಚಿದ ಕಸ್ಟಮ್ಸ್ ಅಧಿಕಾರಿಗಳು ಆತನ ಬಳಿಯಿದ್ದ ಅಕ್ರಮ ಬಂಗಾರವನ್ನು ವಶಪಡಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜಾರುಪಡಿಸಿದರು. ಕಸ್ಟಮ್ಸ್ ವಿಭಾಗದ ಮಂಗಳೂರಿನ ಕಮಿಷನರ್ ಆಗಿರುವ ಡಿ. ಪುರುಷೋತ್ತಮ್ ಅವರು ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ಅಕ್ರಮ ಚಿನ್ನ ಸಾಗಾಟದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆಯಾಕಟ್ಟಿನ ಪ್ರದೇಶಗಳಲ್ಲಿ ತೀವ್ರ ನಿಗಾ ಇರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

By Suddi9

Leave a Reply

Your email address will not be published. Required fields are marked *