ಬಂಟ್ವಾಳ: ಕಳ್ಳಿಗೆ ಗ್ರಾಮದ ಶ್ರೀ ಕನಪಾಡಿತ್ತಾಯ, ಧೂಮಾವತಿ-ಬಂಟ, ಪಿಲಿಚಾಮುಂಡಿ, ಪಂಜುರ್ಲಿ ಹಾಗೂ ಪರಿವಾರ ದೈವಗಳ ದೈವಸ್ಥಾನದ ನೂತನ ಪ್ರಾಕಾರ ಪೌಳಿಸಮರ್ಪಣಾ ಬ್ರಹ್ಮಕಲಶಾಭಿಷೇಕ ವು ವೇದ ಮೂರ್ತಿ ಪೊಳಲಿ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ಬುಧವಾರ ನಡೆಯಿತು.
kanapady
ಬೆಳಗ್ಗೆ 8ರಿಂದ ಗಣಹೋಮ, ಪ್ರತಿಷ್ಠಾ ಹೋಮ ನಡೆದು, 11.20ಕ್ಕೆ ವೃಷಭ ಲಗ್ನದಲ್ಲಿ ದೈವ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ನಡೆಯಿತು. ಬಳಿಕ 12.30ಕ್ಕೆ ಮಹಾಪೂಜೆ, ಪಲ್ಲಪೂಜೆ, ಪ್ರಸಾದ ವಿತರಣೆ ನಡೆದು ಮಧ್ಯಾಹ್ನ 1ರಿಂದ ಕನಪಾಡಿ ದಿ. ರಾಮಣ್ಣ ಪೂಜಾರಿ ಸ್ಮರಣಾರ್ಥ ಅನ್ನಸಂತರ್ಪಣೆ ನಡೆಯಿತು. ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ, ಸಚಿವ ಬಿ.ರಮಾನಾಥ ರೈ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಳ್ಳಿಗೆಗುತ್ತು ಬಿ.ರಾಜಶೇಖರ ರೈ , ತಡ್ಯಾಲುಗುತ್ತು ರಾಕೇಶ್ ಮಲ್ಲಿ, ದೇವಸ್ಯ ಪ್ರಕಾಶ್ ಚಂದ್ರ ರೈ, ನವೀನ್ ಶೆಟ್ಟಿ ಮುಂಡಾಜೆ, ರಾಜರಾಂ ಶೆಟ್ಟಿ ಪೇರ್ಲಬೈಲು, ದೇವದಾಸ್ ಶೆಟ್ಟಿ ತುಂಬೆ, ಚಂದ್ರ ಪ್ರಕಾಶ್ ಶೆಟ್ಟಿ, ಮಧುಸೂದನ್ ಶೆಣೈ, ದಿವಾಕರ ಪಂಬದಬೆಟ್ಟು, ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *