ಬಂಟ್ವಾಳ : ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ(ರಿ), ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ , ಬಂಟ್ವಾಳ ಕಂದಾಯ ಇಲಾಖೆ , ಸಾರ್ವಜನಿಕ ಶಿಕ್ಷಣ ಇಲಾಖೆ , ತಾಲೂಕು ಪಂಚಾಯತ್ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ವಿವಿಧ ಗ್ರಾಮ ಪಂಚಾಯತ್‍ಗಳ ಸಂಯುಕ್ತ ಆಶ್ರಯದಲ್ಲಿ ಸಜಿಪ ಮೂಡ ಗ್ರಾಮ ಪಂ.ನಲ್ಲಿ ನಡೆದ ಕಾನೂನು ಮಾಹಿತಿ ಕಾರ್ಯಕ್ರಮವನ್ನು ಗೌ/ಪ್ರಧಾನ ಸಿವಿಲ್ ನ್ಯಾಯಾಧೀ ಶರಾದ ಜಯಪ್ರಕಾಶ್ ಡಿ.ಆರ್ ಉದ್ಘಾಟಿಸಿದರು . ಸಂಪನ್ಮೂಲ ವ್ಯಕ್ತಿ ನ್ಯಾಯವಾದಿ ನರೇಂದ್ರನಾಥ ಭಂಡಾರಿ ಭೂ ಕಂದಾಯ ಕಾಯಿದೆ ಬಗ್ಗೆ ಮಾಹಿತಿ ನೀಡಿದರು . ಜಿ.ಪಂ.ಮಾಜಿ ಅಧ್ಯಕ್ಷ ಬಿ.ಸದಾನಂದ ಪೂಂಜ ಅಧ್ಯಕ್ಷತೆ ವಹಿಸಿದ್ದರು . ವಕೀಲರ ಸಂಘದ ಅಧ್ಯಕ್ಷ ಚಂದ್ರಶೇಖರ ಪೂಜಾರಿ , ಸಹಾಯಕ ಸರಕಾರಿ ಅಭಿಯೋಜಕಿ ಅರ್ಚನಾ ಪ್ರಸಾದ್ , ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ , ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಮದ್ವರಾಜ್ ಕಲ್ಮಾಡಿ , ಸಜಿಪ ಮೂಡ ಗ್ರಾಮ ಪಂ.ಅಧ್ಯಕ್ಷೆ ಸುಂದರಿ , ನ್ಯಾಯವಾದಿ ಸತೀಶ್ ಬಿ.ಉಪಸ್ಥಿತರಿದ್ದರು .

DSC_0098

By suddi9

Leave a Reply

Your email address will not be published. Required fields are marked *