ಮಂಗಳೂರು: ಮಾರ್ಚ್ 1ರಂದು ಮಂಗಳೂರಿನಲ್ಲಿ ನಡೆಯಲಿರುವ ವಿರಾಟ್ ಹಿಂದೂ ಸಮಾವೇಶಕ್ಕೆ ಸಾಧ್ವಿ ಸರಸ್ವತಿ ಜೀ ಯವರು ಪ್ರಮುಖ ಭಾಷಣಕಾರರಾಗಿದ್ದಾರೆ. ಇವರ ಬರುವಿಕೆಗಾಗಿ ಇಡೀ ದಕ್ಷಿಣ ಕನ್ನಡ ಜಿಲ್ಲೆ ಎದುರು ನೋಡುತ್ತಿದ್ದು, ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.

ಕಳೆದ ಬಾರಿ ಮಂಗಳೂರಿನಲ್ಲಿ ನಡೆದಿದ್ದ ನರೇಂದ್ರ ಮೋದಿಯವರ ಸಮಾವೇಶಕ್ಕೆ ಲಕ್ಷಾಂತರ ಮಂದಿ ಭಾಗವಹಿಸಿದ್ದರು. ಆದರೆ ಅವರ ದಾಖಲೆಯನ್ನು 18 ವರ್ಷದ ಸಾಧ್ವಿಯೋರ್ವರು ಪುಡಿಗಟ್ಟುವ ಸಾಧ್ಯತೆ ಇದೆ. ಸಂತವಾಣಿಗೆ ಅಧಿಕ ವೈತನ್ಯ ಇರುವುದರಿಂದ ಸಾಧ್ವಿಯ ಭಾಷಣದಿಂದ ಲಕ್ಷಾಂತರ ಮಂದಿಗೆ ಏಕಕಾಲದಲ್ಲಿ ಅಧಿಕ ಚೈತನ್ಯ ಸಿಗುವ ಸಾಧ್ಯತೆ ಇದೆ.
ಸಾಧ್ವಿ ಸರಸ್ವತಿ ಜೀಗೆ ಈಗ 18 ವರ್ಷ. ಹುಟ್ಟಿನಿಂದಲೇ ಆಧ್ಯಾತ್ಮದ ಬಗ್ಗೆ ಆಸಕ್ತಿ ತಳೆದಿದ್ದ ಸರಸ್ವತಿ 7 ವರ್ಷದ ಪ್ರಾಯದಲ್ಲೇ ಸಾಧ್ವಿಯಾಗಿ ದೀಕ್ಷೆ ಪಡೆದಿದ್ದಳು.
ಸಾಧ್ವಿ ಇದೀಗ `ಸನಾತನ ಧರ್ಮ ಪ್ರಚಾರ ಸೇವಾ ಸಮಿತಿ’ಯ (ಎಸ್‍ಡಿಪಿಎಸ್‍ಎಸ್) ಅಧ್ಯಕ್ಷೆ. ಇದರ ಮುಖ್ಯ ಕಾರ್ಯಾಲಯವಿರುವುದು ಮಧ್ಯಪ್ರದೇಶ ರಾಜ್ಯದ ಛಂಡೀವಾಡದಲ್ಲಿ.
ಸಾಧ್ವಿ ಸ್ಥಾಪಿಸಿದ ಸನಾತನ ಧರ್ಮ ಪ್ರಚಾರ ಸೇವಾ ಸಮಿತಿಯ ಮುಖ್ಯ ಉದ್ದೇಶವೇನೆಂದರೆ ಸನಾತನ ಹಿಂದೂ ಧರ್ಮವನ್ನು ರಕ್ಷಿಸುವುದಾಗಿದೆ. ತನ್ನ ಏಳು ವರ್ಷದ ಅವಧಿಯಲ್ಲಿ `ಧರ್ಮ ಕಾರ್ಯ’ದಲ್ಲಿ ತೊಡಗಿದ್ದು, ಇದರ ಮುಖ್ಯ ಉದ್ದೇಶವೆಂದರೆ ಹಸುಗಳನ್ನು ರಕ್ಷಿಸುವುದು.
ಹಿಂದೂ ಧರ್ಮದ ಬಗ್ಗೆ ಗಂಟೆಗಟ್ಟಲೆ ಯಾವುದೇ ಅಡೆತಡೆ ಇಲ್ಲದೆ ನಿರರ್ಗಳವಾಗಿ ಭಾಷಣ ಮಾಡುವ ವಾಕ್ಚಾತುರ್ಯವನ್ನು ಸಾಧ್ವಿ ಹೊಂದಿದ್ದಾರೆ. ಮುಖ್ಯವಾಗಿ ಆಧ್ಯಾತ್ಮ, ಪುರಾಣ, ಹಿಂದೂ ಧರ್ಮದ ಹಿನ್ನೆಲೆ, ಪುರಾಣ ಪುರುಷರ ಸಾಹಸಾಗಾಥೆ ಇತ್ಯಾದಿಗಳ ಬಗ್ಗೆ ಬಾಷಣಗೈಯ್ಯುವ ಸಾಮಥ್ರ್ಯ ಹೊಂದಿದ್ದಾರೆ.
ರಾಷ್ಟ್ರದ ಬಗ್ಗೆ ಭಾಷಣ ಮಾಡುತ್ತಾ, ಜನರಲ್ಲಿ ದೇಶಭಕ್ತಿಯನ್ನು ಮೂಡಿಸಿ, ಭಾಷಣ ಮಾಡುವುದರಿಂದ ರಣ ಹೇಡಿಯೂ ಕೂಡಾ ಕೆಚ್ಚೆದೆ ಪ್ರದರ್ಶಿಸುವ ಸಾಮಥ್ರ್ಯ ಹೊಂದಬಹುದು.
ಈಕೆಯ ಬಾಷಣದ ಮುಖ್ಯ ಉದ್ಧೇಶ ಎಂದರೆ ಧರ್ಮ ಶಿಕ್ಷಣ ನೀಡುವುದು. ಹಳ್ಳಿ ಹಾಗೂ ಕಾಡುಪ್ರದೇಶವನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಭಾಗವತ ಹಾಗೂ ರಾಮಾಯಣದ ಮೂಲಕ ಧರ್ಮಶಿಕ್ಷಣ ನೀಡುವ ಅನೇಕ ಸತ್ಸಂಗಗಳನ್ನು ಸಾಧ್ವಿ ನಡೆಸಿದ್ದಾರೆ. ಈಕೆ `ಕೃಷ್ಣ ಗೀತೆ’ಯನ್ನು ಬರೆಯುತ್ತಿದ್ದು, ಅದರು ಇಂಟೆರ್ನಟಲ್ಲಿ `ಕಾಶ್ಮೀರ್ ತೊ ಹೋಗಾ, ಲೇಕಿನ್ ಪಾಕಿಸ್ತಾನ ನಹೀ ಹೋಗಾ’ ಎಂದು ಪ್ರಸಿದ್ಧಿ ಪಡೆದಿದೆ. ನಾಗೇಂದ್ರನಾಥ್ ಜೀ ಆಕೆಯ ಗುರು.
ಈಕೆಯ ಬರುವಿಕೆಗಾಗಿ ಅನೇಕ ಸಮಾನ ಮನಸ್ಕ ಹಿಂದೂ ಸಂಘಟನೆಗಳು ಮಂಗಳೂರನ್ನು ಕೇಸರಿ ಬಾವುಟಗಳಿಂದಂ ಶೃಂಗರಿಸುತ್ತಿದ್ದಾರೆ.
