ಬಂಟ್ವಾಳ: ಪುರಸಭೆಯಲ್ಲಿ ನಡೆದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ – 2015ರ ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ ತರಭೇತಿ ಕಾರ್ಯಕ್ರಮವನ್ನು ಪುರಸಭಾ ಸದಸ್ಯೆ ವಸಂತಿ ಚಂದಪ್ಪ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಯಾಸ್ಮಿನ್, ಪುರಸಭಾ ಸದಸ್ಯರಾದ ಜಗದೀಶ ಕುಂದರ್, ಮಹಮ್ಮದ್ ನಂದರಬೆಟ್ಟು, ಪ್ರಭಾ ಆರ್ ಸಾಲಿಯಾನ್, ಸದಾಶಿವ ಬಂಗೇರ, ಗಂಗಾದರ, ನೋಬರ್ಟ ರೋಡ್ರಿಗ್ರಸ್, ಅಧಿಕಾರಿಗಳಾದ ಮತ್ತಾಡಿ ಮತ್ತು ರಾಧಾಕೃಷ್ಣ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

