ಸಮಾಜೋತ್ಸವ ಹಿನ್ನಲೆಯಲ್ಲಿ ಉಸ್ತುವಾರಿ ಸಚಿವರ ಆದೇಶ
ಮಂಗಳೂರು: ಸಮಾಜದಲ್ಲಿ ಶಾಂತಿ, ಕಾನೂನು ಕೈಗೆತ್ತಿಕೊಳ್ಳುವವರನ್ನು ಪತ್ತೆ ಮಾಡಿ ಅವರ ಜಾತಿ, ಧರ್ಮ, ಭಾಷೆ, ಪ್ರಭಾವ, ಶ್ರೀಮಂತಿಕೆ ಯಾವುದನ್ನು ಪರಿಗಣಿಸದೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಜಿಲ್ಲಾಡಳಿ ಮತ್ತು ಪೋಲಿಸರಿಗೆ ಸೂಚಿಸಿದರು.
peace meeting1

peace meeting
ಮಾ.1ರಂದು ಮಂಗಳೂರಿನಲ್ಲಿ ನಡೆಯಲಿರುವ ಹಿಂದೂ ಸಮಾಜೋತ್ಸವದ ಪೂರ್ವಭಾವಿ ಸಭೆಯಲ್ಲಿ ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಕಾನೂನು ಕೈಗೆತ್ತಿಕೊಳ್ಳವವರ ವಿರುದ್ಧ ಅವರು ಎಷ್ಟು ದೊಡ್ಡವರಾದರೂ ಕಾನೂನು ಕ್ರಮ ಕೈಗೊಳ್ಳಬೇಕು. ಅದಕ್ಕೆ ಯಾರು ಕೂಡ ಅಧಿಕಾರಿಗಳ ಮೇಲೆ ಒತ್ತಡ ತರಬಾರದು. 5.30ಕ್ಕೆ ಕಾರ್ಯಕ್ರಮ ಮುಗಿಸುವ ಜವಾಬ್ದಾರಿಯನ್ನು ಸಂಘಟಕರು ಮಾಡಬೇಕು ಎಂದರು.

By suddi9

Leave a Reply

Your email address will not be published. Required fields are marked *