ಬಂಟ್ವಾಳ: ಸಾವಿರ ವರ್ಷಗಳ ಇತಿಹಾಸವಿರುವ ಅಮ್ಟಾಡಿ ಗ್ರಾಮದ ತಡ್ಯಾಲುಗುತ್ತು ಚಾವಡಿ ಮನೆಯ ಧರ್ಮದೈವಗಳಿಗೆ ಎರಡು ದಿನಗಳ ಕಾಲ ನಡೆದ ಧರ್ಮನೇಮವು ಶುಕ್ರವಾರ ಸಂಪನ್ನಗೊಂಡಿತು. ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ. ಬ್ರಹ್ಮಶ್ರೀ ನರಸಿಂಹಮಯ್ಯ ತಂತ್ರಿಗಳ ನೇತೃತ್ವದಲ್ಲಿ, ವಿವಿಧ ಧಾ ಕ ವಿಧಿವಿಧಾನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಎರಡು ದಿನಗಳಲ್ಲಿ ಮ ಮೈಸಂದಾಯ , ಮರ್ಲ್ ಜುಮಾದಿ, ಅಣ್ಣಪ್ಪ ಪಂಜುರ್ಲಿ ಹಾಗೂ ಜುಮಾಧಿ ಬಂಟ ದೈವಗಳಿಗೆ ಧರ್ಮ ನೇಮ ನಡೆಯಿತು.ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ದಯಾನಂದ ಕತ್ತಲ್ ಸರ್ ಧಾರ್ಮಿಕ ಉಪನ್ಯಾಸ ನೀಡಿದರು. ಇಂಟಕ್ ಕಾರ್ಯಧ್ಯಕ್ಷ ತಡ್ಯಾಲು ಗುತ್ತು ರಾಕೇಶ್ ಮಲ್ಲಿ, ಸದಾನಂದ ಮಲ್ಲಿ, ಸಚಿವ ಬಿ ರಮಾನಾಥ ರೈ,ಕನಪಾಡಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜಶೇಖರ ರೈ, ತಡ್ಯಾಲುಗುತ್ತು ಯಜಮಾನ ಕೆ.ಜಯರಾಮ ಆಳ್ವ, ಪ್ರಮುಖರಾದ ಚಂದ್ರಹಾಸ ಚೌಟ, ಸತೀಶ್ ಭಂಡಾರಿ, ಪುಷ್ಪರಾಜ ಶೆಟ್ಟಿ ಮೊದಲಾದ ಗಣ್ಯರು ಆಗಮಿಸಿದ್ದರು.
