ಬಂಟ್ವಾಳ: ಕಾರಣಿಕ ಕ್ಷೇತ್ರ ಪೆರಾಜೆ ಶ್ರೀ ಗುಡ್ಡಚಾಮುಂಡೇಶ್ವರಿ ದೈವಸ್ಥಾನದ ವಾರ್ಷಿಕ ಜಾತ್ರೆಯು ಗುರುವಾರ ರಾತ್ರಿ ವಿಜ್ರಂಭಣೆಯಿಂದ ನಡೆಯಿತು.


ಫೆ.19ರಂದು ಗೊನೆ ಕಡಿದು ಸಂಪ್ರದಾಯದಂತೆ ಕೋಳಿ ಗುಂಟ ಅ ಬಳಿಕ ಫೆ.25ರಂದು ಸಂಜೆ ಭಂಡಾರವೇರಿ ಧಾರ್ಮಿಕ ವಿಧಿವಿಧಾನಗಳು ಮುಗಿದ ಬಳಿಕ ಮಾರಿ ಪೂಜೆ ನಡೆಯಿತು. ಪೆ.25ರಂದು ಸಂಜೆ ಶ್ರೀ ಗುಡ್ಡಚಾಮುಂಡೇಶ್ವರಿ ದೈವಕ್ಕೆ ನೇಮ ನಡೆಯಿತು. ಉಸ್ತುವಾರಿ ಸಚಿವ ಬಿ.ರಮನಾಥ ರೈ, ಜಿ.ಪಂ.ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಅನುವಂಶಿಕ ಆಡಳಿತ ಮೊಕ್ತೇಶರ ಶ್ರೀಕಾಂತ ಆಳ್ವ, ಶ್ರೀನಾಥ ಆಳ್ವ, ಸ್ಥಳೀಯರಾದ ಬಿ.ಟಿ.ನಾರಾಯಣ ಭಟ್, ಕುಶಲ ಎಂ.ಪೆರಾಜೆ, ಶ್ರೀನಿವಾಸ ಪೆರಾಜೆ ಪೆರಾಜೆ ಯುವಕ ಮಂಡಲದ ಅಧ್ಯಕ್ಷ ಮನೋಜ್ ಅಂಚನ್ ಮತ್ತು ಸಾವಿರಾರು ಭಕ್ತರು ನೇಮೋತ್ಸವದಲ್ಲಿ ಪಾಲ್ಗೊಂಡರು. ಸಂಜೆ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಸುಡುಮದ್ದು ಪ್ರದರ್ಶನ ನಡೆಯಿತು.



