ಬಂಟ್ವಾಳ: ನ್ಯಾಷನಲ್ ಕರಾಟೆ ಫೆಡರೇಶನ್ ಆಫ್ ಇಂಡಿಯಾ ಮತ್ತು ನ್ಯೂಯಾರ್ಕ್ ವರ್ಲ್ಡ್ ಕಾಂಟಿಮೆಂಟ್ಸ್ ಮಾರ್ಷಲ್ ಆಟ್ಸರ್್ ಯೂನಿಯನ್ ಹಾಗೂ ಸ್ಕೂಲ್ ಗೇಮ್ಸ್ ಆಫ್ ಫೆಡರೇಶನ್ ಆಫ್ ಇಂಡಿಯಾ ಮತ್ತು ರೂರಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ಮಹಾರಾಷ್ಟ್ರದ ಪುಣೆ ಸ್ವರ್ಟ್ನಗಾಲೇಟ್ ಬಾಬೂರಾವ್ ಸನಾರ್ಸ್ ಬ್ಯಾಡ್ಮಿಂಟನ್ ಹಾಲ್ನಲ್ಲಿ ಈಚೆಗೆ ನಡೆದ ಎನ್.ಕೆ.ಎಫ್.ಐ. ಓಪನ್ ಇಂಟರ್ನ್ಯಾಷನಲ್ ಕರಾಟೆ ಎಂಡ್ ಕಿಕ್ ಬಾಕ್ಸಿಂಗ್ ಚಾಂಪಿಯನ್ಶಿಪ್ -2015 ಸ್ಪಧರ್ೆಯಲ್ಲಿ ಬಂಟ್ವಾಳ ತಾಲ್ಲೂಕಿನ ಮೂಡುಪಡುಕೋಡಿ ನರ್ವಲ್ದಡ್ಡ ನಿವಾಸಿ ಸಹನಾ ಎಂ.ಶೆಟ್ಟಿ ಗೆದ್ದು ಮತ್ತೆ ಚಿನ್ನದ ಪದಕ ಗಳಿಸಿದ್ದಾರೆ.
26btl-sahana
ಈಗಾಗಲೇ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಸಹಿತ ಕಿರಿ ವಯಸ್ಸಿನಲ್ಲೇ ನೇಪಾಳ ಮತ್ತಿತರ ಕಡೆಗಳಲ್ಲಿ ಅಂತರ್ರಾಷ್ಟ್ರೀಯ ಕರಾಟೆ ಸ್ಪರ್ಧೆಗಳಲ್ಲಿ ಚಿನ್ನದ ಪದಕ ದೊರೆತಿದೆ. ಇದೀಗ ಮತ್ತೆ 26-30 ಕೆಜಿ ಸಬ್ಜ್ಯೂನಿಯರ್ ವಿಭಾಗದಲ್ಲಿ ಈ ಗೆಲುವು ದಾಖಲಿಸಿದ್ದಾರೆ. ಭಾರತ ಸರಕಾರದ ಮಿನಿಸ್ಟ್ರಿ ಆಫ್ ಯೂತ್ ಎಫೇರ್ಸ್ ಎಂಡ್ ಸ್ಪೋರ್ಟ್  ಮತ್ತು ಏಷಿಯನ್ ಎಂಡ್ ವರ್ಲ್ಡ್  ರೂರಲ್ ಗೇಮ್ಸ್ ಫೆಡರೇಶನ್ ಮೂಲಕ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಮೂಲಕ ಮಾರ್ಚ್  ತಿಂಗಳಲ್ಲಿ ಭೂತಾನ್ನಲ್ಲಿ ನಡೆಯಲಿರುವ ಅಂತರ್ರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ಗೆ ಆಯ್ಕೆಗೊಂಡಿದ್ದಾರೆ.
ಬಂಟ್ವಾಳ ತಾಲ್ಲೂಕಿನ ಮೂಡುಪಡುಕೋಡಿ ಗ್ರಾಮದ ನರ್ವಲ್ದಡ್ಡ ನಿವಾಸಿ ಮೋಹನ ಶೆಟ್ಟಿ ದಂಪತಿ ಪುತ್ರಿಯಾಗಿರುವ ಈಕೆ ಇರ್ವತ್ತೂರು ಬುರೂಜ್ ಆಂಗ್ಲ ಮಾಧ್ಯಮ ಶಾಲೆ ಹಳೆವಿದ್ಯಾರ್ಥಿ ಯಾಗಿದ್ದು, ಪ್ರಸಕ್ತ ಬಂಟ್ವಾಳ ವಿದ್ಯಾಗಿರಿ ಎಸ್ವಿಎಸ್ ಪ್ರೌಢ ಶಾಲೆ 8ನೇ ತರಗತಿ ವಿದ್ಯಾಥರ್ಿನಿ. ಮೂಡಬಿದಿರೆ ಶೋರಿನ್ ರಿಯೋ ಕರಾಟೆ ಎಸೋಸಿಯೇಶನ್ನ ಶಿಕ್ಷಕರಾದ ನದೀಂ ಮತ್ತು ಸರ್ಪ್ ರಾಜ್ ಕರಾಟೆ ತರಬೇತಿ ನೀಡಿದ್ದಾರೆ.

By suddi9

Leave a Reply

Your email address will not be published. Required fields are marked *