ಮೂಡುಬಿದರೆ: ಹೊಸಬೆಟ್ಟು ಗ್ರಾಮದಲ್ಲಿ ನಡೆದುಕೊಂಡು ಹೋಗಿ ಟಪಾಲನ್ನು ಮುಟ್ಟಿಸುವ ಕಾಯಕದಲ್ಲಿ ತೊಡಗಿರುವ ಇಲಾಖೇತರ ಅಂಚೆ ಪೇದೆ ರಾಘವೇಂದ್ರ ಭಟ್ ಅವರನ್ನು ದಂಪತಿ ಸಹಿತ ಗುರುವಾರ ಪೋಸ್ಟಲ್ ಫೆಬ್ರವರಿ ಪ್ರಯುಕ್ತ ಸನ್ಮಾನಿಸಲಾಯಿತು.
.ಜೇಸಿಐ ಪೋಸ್ಟಲ್ ಫೆಬ್ರವರಿ ಕಾರ್ಯಕ್ರಮದಲ್ಲಿ ರಾಘವೇಂದ್ರ ಭಟ್ ದಂಪತಿಯನ್ನು ಸನ್ಮಾನಿಸಲಾಯಿತು.
ಜೆ.ಸಿ.ಐ ಮೂಡುಬಿದರೆ ತ್ರಿಭುವನ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಜೆ.ಸಿ.ಐ.ನ ವಲಯ 15 ರ ಉಪಾಧ್ಯಕ್ಷ ಜೇಸಿ ಅನಿಲ್ ಕುಮಾರ್ ಹಾಗೂ ಲಯನ್ಸ್ ಕ್ಲಬ್ ಅಲಂಗಾರಿನ ಅಧ್ಯಕ್ಷ ಲಯನ್ ಮನೋಹರ್ ಡಿಕುನ್ಹಾ ಮುಖ್ಯ ಅತಿಥಿಗಳಾಗಿದ್ದರು. ಅಧ್ಯಕ್ಷತೆಯನ್ನು ಜೇ.ಸಿ.ಐ. ಅಧ್ಯಕ್ಷ ಧೀರೇಂದ್ರ ಜೈನ್ ವಹಿಸಿದ್ದರು.
ಕಾರ್ಯಕ್ರಮದ ಪ್ರಾಯೋಜಕ ಜೇಸಿ ಪ್ರತಾಪ್ ಕುಮಾರ್, ಜೇಸಿ ದಿನೇಶ್ ಆನಡ್ಕ, ಕಾರ್ಯದರ್ಶಿ ಸುದೀಪ್ ಬುನ್ನನ್ ಉಪಸ್ಥಿತರಿದ್ದರು.
ಇತ್ತೀಚೆಗೆ ನಿಧನರಾದ ಜೇಸಿ ಆದಿತ್ಯ ಭಟ್ ಅವರಿಗೆ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
