ಮೂಡುಬಿದರೆ: ಫೆ.8ರಂದು ಹೃದಯಾಘಾತದಲ್ಲಿ ಮೃತರಾದ ಮಾವಿನಕಟ್ಟೆ ನಿವಾಸಿ ಬಾಲಕೃಷ್ಣ ಅವರ ಕುಟುಂಬಕ್ಕೆ ಮೂಡುಬಿದರೆ ಆಟೋ ಚಾಲಕ ಮಾಲಕ ಸಂಘದ ಕ್ಷೇಮನಿಧಿಯಿಂದ ಬುಧವಾರ ಸಹಾಯಧನ ವಿತರಿಸಲಾಯಿತು.
ಬಾಲಕೃಷ್ಣ ಗೌಡ ಪತ್ನಿ ರೂಪಾವತಿಯವರಿಗೆ 12,350 ರೂ.ಗಳನ್ನು ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಭಾಸ್ಕರ ಆಚಾರ್ಯ ಹಸ್ತಾಂತರಿಸಿದರು. ಸಂಘದ ಸದಸ್ಯರಾದ ರಾಮಚಂದ್ರ ಭಟ್, ಸುರೇಶ್ ಕೋಟ್ಯಾನ್, ಸುಕುಮಾರ್ ದೇವಾಡಿಗ, ಆನಂದ ಪೂಜಾರಿ, ಜಯರಾಮ್ ರಾವ್, ರಾಜು ಶೆಟ್ಟಿ, ಸಂತೋಷ್ ಬಾಕಿಮಾರುಕೋಡಿ ಉಪಸ್ಥಿತರಿದ್ದರು.

mbd_feb25_1

By suddi9

Leave a Reply

Your email address will not be published. Required fields are marked *