ಮೂಡುಬಿದರೆ: ಫೆ 21ರಿಂದ 23ರವರೆಗೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಶ್ರೀ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಾಗೂ ಕರ್ನಾಟಕ ರಾಜ್ಯ ಕುಸ್ತಿ ಅಸೋಸಿಯೇಶನ್ರವರ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯರು ಸಾಧನೆ ಮಾಡಿದ್ದಾರೆ.

ಅನುಶ್ರೀ +55 ಕೆ.ಜಿ. ಮೇಲ್ಪಟ್ಟ ಮಹಿಳೆಯರ ಕುಸ್ತಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ವೀರರಾಣಿ ಚೆನ್ನಮ್ಮ ಕೇಸರಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
55 ಕೆ.ಜಿ ವಿಭಾಗದಲ್ಲಿ ಮೇಘನಾ, 42 ಮಮತಾ ಕೇಳೂಜಿ ಪ್ರಥಮ ಸ್ಥಾನ ಪಡೆದರು. +55 ವಿಭಾಗದಲ್ಲಿ ಆತ್ಮಶ್ರೀ, 50 ಕೆ.ಜಿ ವಿಭಾಗದಲ್ಲಿ ಧನಶ್ರೀ ಪಾಟೀಲ, 55 ವಿಭಾಗದಲ್ಲಿ ರಂಜಿತಾ ಎನ್. ದ್ವಿತೀಯ ಸ್ಥಾನಿಯಾಗಿದ್ದರು. 55 ವಿಭಾಗದಲ್ಲಿ ಕಾವ್ಯ ತೃತೀಯ ಸ್ಥಾನ ಪಡೆದಿದ್ದಾರೆ.
