ಬೆಂಗಳೂರು: ಮದುವೆ ಮಹೂರ್ತಕ್ಕೆ ಇನ್ನೇನು ಕೆಲವೇ ನಿಮಿಷವಿದೆ ಎಂದಾಗ ವಧು ಮಂಟಪದಿಂದ ತಪ್ಪಿಸಿ ಪ್ರಿಯಕರನ ಜೊತೆ ಪರಾರಿಯಾದ ಘಟನೆ ಬೆಂಗಳೂರಿನ ಸುಂಕದಕಟ್ಟೆ ಎಂಬಲ್ಲಿ ನಡೆದಿದೆ.

ಸುಂಕದಕಟ್ಟೆಯ ವಿಜಯಚಂದ್ರ ಕಲ್ಯಾಣ ಮಂಟಪದಲ್ಲಿ ಮಂಡ್ಯದ ಪೂರ್ಣಿಮಾ ಎಂಬಾಕೆಯ ಮದುವೆ ಕುಣಿಗಲ್ನ ಮಂಜುನಾಥ್ ಎಂಬವರೊಂದಿಗೆ ನಿಶ್ಚಯವಾಗಿತ್ತು.
ಹೊಟ್ಟೆ ಸರಿಯಿಲ್ಲ ಎಂದು ನಾಟಕವಾಡಿದ ಈಕೆ ಬಾತ್ ರೂಮಿಗೆ ತೆರಳಿ ಅಲ್ಲಿಂದ ಪ್ರಿಯಕರ ರಘು ಜೊತೆ ಪರಾರಿಯಾಗಿದ್ದಾಳೆ.
ಕಂಗಾಲಾದ ಮನೆಯವರು ವರನಿಗೆ ಸಂಬಂಧಿಕ ಕನ್ಯೆಯನ್ನು ಮದುವೆ ಮಾಡಿಸಲು ಮುಂದಾದದರು. ಆದರೆ ಆಕೆ ತನಗಿಂತ ವಯಸಲ್ಲಿದೊಡ್ಡವಳು ಎಂಬ ಕಾರಣಕ್ಕೆ ಮದುವೆಯಾಗಲು ನಿರಾಕರಿಸಿದ್ದಾನೆ. ಈ ಮಗಳನ್ನು ಹುಡುಕಿಕೊಡುವಂತೆ ಹೆತ್ತವರು ಕಾಮಾಕ್ಷಿಪಾಳ್ಯ ಠಾಣೆಗೆ ದೂರು ನೀಡಿದ್ದಾರೆ.
