ನವದೆಹಲಿ: ಗಣರಾಜ್ಯೋತ್ಸವದ ಸಂದರ್ಭ ಭಾರತದ ಪ್ರಧಾನಿ ನರೇಂದ್ರ ಮೋದಿ ಧರಿಸಿದ ಕುರ್ತಾ(ಸ್ಯೂಟ್) 15 ಲಕ್ಷ ಬೆಲೆ ಬಾಳುವಂಥದ್ದು, ಅದನ್ನು ಅಮೇರಿಕಾದಿಂದ ತರಿಸಲಾಗುತ್ತಿತ್ತು ಎಂಬ ಸುದ್ದಿ ಸುಳ್ಳೆಂದು ಸಾಬೀತಾಗಿದೆ. ಮೋದಿ ಧರಿಸಿದ ಸ್ಯೂಟ್(ಕುರ್ತಾ)ನ ಅಸಲಿ ಬೆಲೆ 10 ಸಾವಿರ ರೂ ಆಗಿದ್ದು, ಇದೆಲ್ಲಾ ಮೋದಿಯ ವೈರಿಗಳು ಹಬ್ಬಿಸಿದ ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ.

modi kurtha moodi kurtha
ಈ ಸ್ಯೂಟನ್ನು ಅಹಮದಾಬಾದ್‍ನ ದಿರಿಸು ಮಳಿಗೆಯಾದ `ಜೇಡ್‍ಬ್ಲ್ಯೂ’ ಎಂಬ ಕಂಪೆನಿ ಹೊಲಿದು ಕೊಟ್ಟಿದೆ ಅದೇ ಹೆಸರಿನ ಟ್ರೇಡ್‍ಮಾರ್ಕ್ ಹೊಂದಿದೆ. ಮೋದಿಯವರಿಗೆ ಪ್ರತಿಯಂದು ಕುರ್ತಾಗಳನ್ನು ಹೊಲಿದು ಕೊಡುವ ಜವಾಬ್ದಾರಿಯನ್ನು ಆ ಮಳಿಗೆ ಹೊಂದಿದ್ದು, ಅದಕ್ಕಾಗಿಯೇ ಅವರ ಬಟ್ಟೆಯ ಮೇಲೆ ನರೇಂದ್ರ ಮೋದಿ ಎಂದು ಮುದ್ರಿಸಿದೆ ಎಂಬ ಅಂಶ ತಿಳಿದುಬಂದಿದೆ.
ಈ ಬಗ್ಗೆ ಜೇಡ್‍ಬ್ಲ್ಯೂ ಬಟ್ಟೆ ಅಂಗಡಿ ಸ್ಪಷ್ಟನೆ ನೀಡಿದೆ. ಈ ದಿರಿಸನ್ನು ಮಳಿಗೆಯ ಆಕಾಶ್ ಅಗರ್ವಾಲ್ ಎಂಬವರು ಹೊಲಿದು ಕೊಟ್ಟಿದ್ದಾರೆ. ಅದಕ್ಕೆ 15 ಲಕ್ಷ ರೂ ಆಗಿರಲು ಸಾಧ್ಯವೇ ಇಲ್ಲ ಎಂದು ಹೇಳಿಕೊಂಡಿದೆ. ವಿಶೇಷ ಸಂದರ್ಭದಲ್ಲಿ ಮೋದಿಯವರಿಗೆ ಕುರ್ತಾ, ಜುಬ್ಬಾ ಮುಂತಾದ ದಿರಿಸುಗಳನ್ನು ಹೊಲಿದುಕೊಡುತ್ತೇವೆ. ಅದಕ್ಕೆ ಮೋದಿ ಹಣ ಕೊಡುತ್ತಾರೆ ಎಂದು ಆ ಬಟ್ಟೆಯಂಗಡಿ ಸ್ಪಷ್ಟಪಡಿಸಿದೆ.
ಸ್ಯೂಟ್ ಬೆಲೆ 10 ಸಾವಿರ ಆಗಿದ್ದು, ಅದರ ಹೊಲಿಗೆಗೆ 7000 ರೂ ಮೋದಿ ನೀಡಿದ್ದರು. ಪ್ರಧಾನಿಯಾಗಿ ಇಷ್ಟು ಬೆಲೆಯ ದಿರಿಸನ್ನು ಮೋದಿ ಧರಿಸಿದರೆ ಏನು ತಪ್ಪು ಎಂದು ಮಳಿಗೆ ಪ್ರಶ್ನಿಸಿದೆ. ನೂರು ಸುಳ್ಳು ಹೇಳಿದರೆ ಅದು ಸತ್ಯವಾಗುತ್ತದೆ ಎಂಬ ಗೊಬೆಲ್ಸ್ ತತ್ವದಂತೆ ಮೋದಿಯ ಸ್ಯೂಟ್ ಬಗ್ಗೆ ನಿರಂತರ ಕಥೆ ಕಟ್ಟಿದ ಪರಿಣಾಮ ಮೋದಿಯ ದಿರಿಸಿನ ಬಗ್ಗೆ ಅನುಮಾನ ಉಂಟಾಗಲು ಕಾರಣವಾಗಿದೆ. ಈ ಬಗ್ಗೆ ನರೇಂದ್ರ ಮೋದಿಯವರೇ ಬೇಸರಿಸಿಕೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *