ಉಳ್ಳಾಲ: ಇತಿಹಾಸ ಪ್ರಸಿದ್ದ ಖುತುಬುಝ್ಝಮಾನ್ ಅಸ್ಸ್ಯುದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ) ತಂಙಳ್ ರವರ 423ನೇ ವಾರ್ಷಿಕ ಹಾಗೂ 20ನೇ ಪಂಚವಾರ್ಷಿಕ ಉರೂಸ್ ಸಮಾರಂಭಕ್ಕೆ ಉಳ್ಳಾಲ ದರ್ಗಾ ಸಮಿತಿಯ ನಿಯೋಗವು ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಉರೂಸ್ ಗೆ ಆಹ್ವಾನಿಸಿದರು.

ಈ ಸಂದರ್ಭದಲ್ಲಿ ದರ್ಗಾ ಅಧ್ಯಕ್ಷರಾದ ಯು.ಎಸ್ ಹಂಝ, ಆರೋಗ್ಯ ಸಚಿವರಾದ ಯು.ಟಿ ಖಾದರ್, ದರ್ಗಾ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ವೇ, ಪ್ರಚಾರ ಸಮಿತಿಯ ಕನ್ವೀನರುಗಳಾದ ಮೊಯ್ದಿನಬ್ಬ ಆಝಾದ್ ನಗರ, ಝಿಯಾದ್ ತಂಙಳ್ ಮತ್ತು ಹನೀಫ್ ಉಪಸ್ಥಿತರಿದ್ದರು.
ಉರೂಸ್ ಸಮಾರಂಭವು ಎಪ್ರಿಲ್ 2 ರಿಂದ 26 ರ ತನಕ ಜರುಗಲಿದ್ದು ಮುಖ್ಯಮಂತ್ರಿಗಳು ಎಪ್ರಿಲ್ 24ರಂದು ಜರುಗಲಿರುವ ಸಾಮಾಜಿಕ, ರಾಜಕೀಯ ಮುಖಂಡರುಗಳ ಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
