ಬಂಟ್ವಾಳ: ಮಾರ್ಚ್ 1ರಂದು ಮಂಗಳೂರಿನಲ್ಲಿ ನಡೆಲಿರುವ ವಿರಾಟ್ ಹಿಂದೂ ಸಮಾಜೋತ್ಸವಕ್ಕೆ ದಿಕ್ಸೂಚಿ ಭಾಷಣ ಮಾಡಲು ಆಗಮಿಸಲಿರುವ ಸಾಧ್ವಿ ಸರಸ್ವತಿಯವರ ಭಾವಚಿತ್ರವನ್ನು ಅರೆನಗ್ನಗೊಳಿಸಿ ಫೇಸ್ಬುಕ್ನಂಥಾ ಸಾಮಾಜಿಕ ತಾಣದಲ್ಲಿ ಹರಿಯಬಿಟ್ಟ ಯುವಕನ ವಿರುದ್ಧ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್ಬುಕ್ಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅಲ್ಲದೆ ಆರೋಪಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿಹಿಂಪ ಹಾಗೂ ಬಜರಂಗದಳ ಸಂಘಟನೆ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದೆ.


ಈ ರೀತಿ ಭಾವಚಿತ್ರ ಹಾಕಿದ ಯುವಕನನ್ನು ಬಂಟ್ವಾಳದ ಪರ್ಲಿಯಾ ನಿವಾಸಿ ಮಹಮ್ಮದ್ ನೌಫಾಲ್ ಎಂದು ಗುರುತಿಸಲಾಗಿದೆ.
`ಸಾಧ್ವಿಜೀಯ ಫೋಟೋವನ್ನು ಅಶ್ಲೀಲವಾಗಿ ತನ್ನ ಎಫ್ಬಿಯಲ್ಲಿ ಹಾಕಿರುವ ಈತನನ್ನು ಸುಮ್ಮನೆ ಬಿಡಬಹುದೇ…? ಎಂಬ ಇಮೇಜ್ ಸೃಷ್ಟಿಸಿ ವಾಟ್ಸಾಪ್ಗಳಲ್ಲಿ ಕಳಿಸಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಅಲ್ಲದೆ ಈತನ ಮನೆಯ ವಿಳಾಸವನ್ನೂ ಕೂಡಾ ವಾಟ್ಸಾಪ್ನಲ್ಲಿ ಹರಿದಾಡಿಸಿ ಆತನನ್ನು ಸುಮ್ಮನೆ ಬಿಡಬಾರದು ಎಂಬ ಒಕ್ಕಣೆಯುಳ್ಳ ಬರಹ ವಾಟ್ಸಾಪ್ನಲ್ಲಿ ಹರಿದಾಡುತ್ತಲೇ ಇದೆ.
ಆರೋಪಿಯ ಮೇಲೆ ಸೈಬರ್ ಕ್ರೈಂ ಆಧಾರದಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.
