ಮೂಡುಬಿದಿರೆ: ಧಾರ್ಮಿಕರು ಕೇವಲ ಉತ್ತಮ ಜಾತಿಯಿಂದ ಹುಟ್ಟಿದ ಕೂಡಲೇ ದೋಡ್ಡವರಾಗುವುದಿಲ್ಲ. ಉತ್ತಮ ಮನಸ್ಸು ಶಾಂತಿ ಸೌಹರ್ದ ಬಾವನೆಗಳು ಪರಸ್ಪರ ವಿಶ್ವಾಸದಿಂದ ಕೂಡಿದ ಮನಸ್ಸು ಸ್ವಚ್ಚವಿದ್ದಾಗ ಉತ್ತಮರಾಗುವುದು ಸಾದ್ಯ . ಕಸತುಂಬಿದ ಮನೆ ಕಶ್ಮಲಗಳಿಂದ ತುಂಬಿದ ಮನಸ್ಸು ಸ್ವಚ್ಚವಾಗಿಡದ ಮಂದಿರ ಸ್ವಚ್ಚವಾಗಿಡಿ. ಆಗ ಜೀವನ ಪಾವನವಾಗುತ್ತದೆ ಎಂದು ರಾಷ್ಟ್ರಸಂತ ಜಂಗಲ್ ವಾಲೆ ಬಾಬ ಚಿನ್ಮಯಸಾಗರ ಮುನಿ ಮಹರಾಜರು ನುಡಿದರು ಅವರು ಕಳೆದ ಶನಿವಾರ ಜ 31 ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶ ಮಾಡಿದ್ದು ರವಿವಾರ ಇತಿಹಾಸ ಪ್ರಸಿದ್ಧ ಮೂಡುಬಿದಿರೆಯ ಬಡಗ ಬಸದಿ ರಥೋತ್ಸವದಲ್ಲಿ ಬಾಗವಹಿಸಿ ಆಶೀರ್ವಚನ ನೀಡಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜೈನಮಠದ ಭಟ್ಟಾರಕ ಶ್ರೀಗಳವರು ಭಗವಾನ್ ಚಂದ್ರನಾಥಸ್ವಾಮಿ ರಾಜ ವೈಭವವನ್ನು ಬಿಟ್ಟು ತ್ಯಾಗಮಾರ್ಗವನ್ನು ಉಪದೇಶಿಸಿ ಮೋಕ್ಷಮಾರ್ಗ ಎಲ್ಲರಿಗೂ ಶ್ರೇಷ್ಠಪಥ ಎಂದು ತೋರಿಸಿಕೊಟ್ಟರು. ರಥೋತ್ಸವ ಧರ್ಮ ಪ್ರಭಾವನೆಯ ಹಬ್ಬ ಎಲ್ಲರ ಪಾಲ್ಗೊಳ್ಳುವಿಕೆಯಿಂದ ಉತ್ಸವ ನೂರ್ಮಡಿಯಾಗುತದೆ ಎಂದು ನುಡಿದರು. ಕ್ಷುಲ್ಲಕ ನಿವರ್ಾಣಸಾಗರ ಉಪಸ್ತಿತರಿದ್ದರು. ಪಟ್ಣಶೆಟ್ಟಿ ಸುದೇಶ್ ಕುಮಾರ್ ಸ್ವಾಗತಿಸಿ ಸಂಜಯಂತ ಕುಮಾರ್ ವಂದಿಸಿದರು. ಪಂಚಮಿ ಮಾರೂರು ಇವರ ನೃತ್ಯ ಕಾರ್ಯಕ್ರಮದ ಬಳಿಕ ರಥೋತ್ಸವ ಶ್ರೀ ವಿಹಾರ ಜರುಗಿತು. ಪೂಜಾ ಸೇವ ಕತರ್ೃಗಳನ್ನು ರಥೋತ್ಸವ ಸೇವಾದಾರರಾದ ಭರತ್ ಇಂದ್ರ ಮಂಗಳೂರು ವಿರೇಂದ್ರ ಕುಮಾರ್ ಇವರನ್ನು ಮೂಡುಬಿದಿರೆ ಶ್ರೀ ಶ್ರೀಗಳವರು ಶ್ರೀಪಲವನ್ನಿತ್ತು ಗೌರವಸಿ ಹರಸಿ ಆಶೀರ್ವದಿಸಿದರು. ಇದೇ ಸಂದರ್ಭ ಮುನಿ ಸಂಘದ ಸೇವಾ ನಿರತರನ್ನು ಶ್ರೀ ಮಠದ ಪರವಾಗಿ ಹರಸಿ ಆಶೀರ್ವದಿಸಲಾಯಿತು.

