ನವದೆಹಲಿ: ದೆಹಲಿಯ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇನ್ನೇನು ಎಂಬಂತೆ ತೆರೆ ಬೀಳಲಿದೆ. ಆದರೆ ಬಿಜೆಪಿಯ ಕಿರಣ್ ಬೇಡಿ ಹಾಗೂ ಆಪ್ ಪಕ್ಷದ ಅರವಿಂದ ಕೇಜ್ರಿವಾಲ್ ಅವರು ಎಮೋಷನಲ್ ಬ್ಲ್ಯಾಕ್‍ಮೆಲ್ ಮೂಲಕ ಜನರ ಅನುಕಂಪ ಗಿಟ್ಟಿಸಲು ನಾನಾ ಕಸರತ್ತು ನಡೆಸುತ್ತಿದ್ದಾರೆ.

kiran_bedi
ರುಸಿನ ಪ್ರಚಾರ ನಡುವೆ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಕಿರಣ್ ಬೇಡಿ, ವಿಧಿ ನನ್ನನ್ನು ರಾಜಕೀಯಕ್ಕೆ ಕರೆತಂದಿದೆ. ನನಗೆ ಬೇರೇನೂ ಉದ್ದೇಶವಿಲ್ಲ. ದೇವರು ನನಗೆ ಎಲ್ಲವನ್ನೂ ಕೊಟ್ಟಿದ್ದಾನೆ. ದೆಹಲಿಯ ಜನರ ಸೇವೆ ಮಾಡಬೇಕು ಎಂಬುದು ನನ್ನ ಮನಸ್ಸಿನ ತುಡಿತ. ನಾನಿಲ್ಲಿ ಸೋಲಲು ಬಂದಿಲ್ಲ, ಗೆಲುವು ನನ್ನದೇ.
ನನಗೆ 14 ವರ್ಷ ಇರುವಾಗ ನಾನಿಲ್ಲಿಗೆ ಟೆನ್ನಿಸ್ ಮ್ಯಾಚ್ ಆಡುವ ಸಲುವಾಗಿ ಅಮೃತಸರದಿಂದ ಬರುತ್ತಿದ್ದೆ. ಈ ನಗರದಲ್ಲಿ ನಾನು ಸೇವೆ ಮಾಡಬೇಕೆಂದು ಬಯಸಿದ್ದೆ. ದೇವರ ಅನುಗ್ರಹದಿಂದ ನನಗೆ ಮೊದಲ ಕೆಲಸದ ನೇಮಕಾತಿ ಇಲ್ಲೇ ಆಗಿದ್ದು. ನಾನು ದೆಹಲಿಯನ್ನು ಪ್ರೀತಿಸುತ್ತೇನೆ. ಒಬ್ಬ ಅಮ್ಮನಂತೆ ನಾನಿಲ್ಲಿದ್ದೀನಿ ಎಂದು ಬೇಡಿ ಹೇಳಿದ್ದಾರೆ.

Kejriwal1
ಅದೇ ರತಿ ಆಪ್ ಮುಖಂಡ ಅರವಿಂದ ಕೇಜ್ರಿವಾಲ್ ಮಾತಾಡುತ್ತಾ, ನಾನು ಇಲ್ಲಿಗೆ ಗೆಲ್ಲಲೆಂದೇ ಬಂದಿದ್ದೇನೆ. ಗೆಲವು ಬಿಟ್ಟು ಬೇರೇನೂ ಇಲ್ಲ. ಖಂಡಿತಾ ಗೆಲ್ತೀನಿ ಯಾಕೆಂದರೆ ನನ್ನ ಹಿಂದೆ ದೇವರಿದ್ದಾನೆ.. ಎಂದಿದ್ದಾರೆ

By suddi9

Leave a Reply

Your email address will not be published. Required fields are marked *